ಮೂಡಬಿದ್ರೆ:ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಇಲ್ಲಿನ 2023-2024ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಾಂಟ್ರಾಡಿ ಇಲ್ಲಿ ನೆರವೇರಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದ ಡಾ. ಸುರೇಶ್ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರು ವಿಶ್ವವಿದ್ಯಾನಿಲಯ ಕಾಲೇಜ್ ನೆಲ್ಯಾಡಿ ಉದ್ಘಾಟನೆಯನ್ನು ನೆರವೇರಿಸಿ ರಾಷ್ಟ್ರೀಯ ಸೇವಾ ಯೋಜನೆಯ ಕೆಲವು ವಿಚಾರಗಳನ್ನು ಹಾಗೂ ಅದರಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ವಿಕೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಡಾ. ದಯಾನಂದ ನಾಯ್ಕ್ ಅವರ ಅನುಪಸ್ಥಿತಿಯಲ್ಲಿ ಅಧ್ಯಕ್ಷರಾಗಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿಯಾದ ಶ್ರೀಮತಿ ಗಾಯತ್ರಿ ಇವರು ಉಪಸ್ಥಿತರಿದ್ದು ಅಧ್ಯಕ್ಷೀಯ ಭಾಷಣವನ್ನು ಮಾಡಿದರು, ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಪದ್ಮಕುಮಾರ್ ಅನುವಂಶಿಕ ಆಡಳಿತ ಮೋಕ್ತೆಸರರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಮಾಂಟ್ರಾಡಿ, ಶ್ರೀ ರಾಜೇಶ್ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮಾಂಟ್ರಾಡಿ, ಶ್ರೀಮತಿ ಮೃದುಲಾ ಕುಮಾರಿ ಮುಖ್ಯೋಪಾಧ್ಯಾಯರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಾಂಟ್ರಾಡಿ ಹಾಗೂ ಶಿಬಿರಾಧಿಕಾರಿಗಳಾದ ರವಿರಾಜ್ ಬಿಜಿ ಇವರು ಉಪಸ್ಥಿತರಿದ್ದರು.ಕುಮಾರಿ ಸವಿತಾ ಸ್ವಾಗತಿಸಿದರು, ಎನ್ ಎಸ್ ಎಸ್ ಘಟಕದ ನಾಯಕಿಯದ ಕುಮಾರಿ ಸುಶ್ಮಿತಾ ನಿರೂಪಿಸಿದರು,ಕುಮಾರಿ ಹೃತಿಕಾ ವಂದಿಸಿದರು.