ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಇಲ್ಲಿನ ರಾಷ್ಟೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ದಿನಾಂಕ 26.03.2025 ನೇ ಬುಧವಾರ ದಂದು ಉದ್ಘಾಟನಾ ಸಮಾರಂಭವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವರ್ಣಬೆಟ್ಟು ಇಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಸುಚರಿತ ಶೆಟ್ಟಿ, ಅಧ್ಯಕ್ಷರು, ದ. ಕ. ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಇವರು ಆಗಮಿಸಿದ್ದರು. ಕಾಲೇಜಿನ ಸಂಯೋಜಕರಾದ ಡಾ. ಕುಮಾರ ಸುಬ್ರಹ್ಮಣ್ಯ ಭಟ್, ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುರೇಶ್ ಪೂಜಾರಿ ತಾಳಿದಡಿ, ಅಧ್ಯಕ್ಷರು ಹಳೇವಿದ್ಯಾರ್ಥಿ ಸಂಘ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವರ್ಣಬೆಟ್ಟು ಮತ್ತು ಸದಸ್ಯರು, ಪಾಲಡ್ಕ ಗ್ರಾಮ ಪಂಚಾಯತ್, ಸುಧೀರ್ ಶೆಟ್ಟಿ ಸದಸ್ಯರು, ಪಾಲಡ್ಕ ಗ್ರಾಮ ಪಂಚಾಯತ್, ಸವಿತಾ ಸುರೇಶ್ ಸದಸ್ಯರು, ಪಾಲಡ್ಕ ಗ್ರಾಮ ಪಂಚಾಯತ್, ರಾಜೇಶ್ ಪೂಜಾರಿ ಕೆಂಜ, ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವರ್ಣಬೆಟ್ಟು, ಮೇಬಲ್ ಡಿ ಸೋಜಾ, ಮುಖ್ಯಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವರ್ಣಬೆಟ್ಟು, ಪ್ರಮೀಳಾ ಅಂಗನವಾಡಿ ಕಾರ್ಯಕರ್ತೆ, ವರ್ಣಬೆಟ್ಟು ಹಾಗೂ ರಾಷ್ಟೀಯ ಸೇವಾ ಯೋಜನಾ ಅಧಿಕಾರಿಗಳಾದ ಶ್ರೀ ರವಿರಾಜ್ ಬಿ. ಜಿ ಮತ್ತು ಕುಮಾರಿ ಪುಷ್ಪ ಮತ್ತು ಶಿಬಿರದ ನಾಯಕ ಉದಯ್ ಕೆ ಮತ್ತು ನಾಯಕಿ ಸುಕನ್ಯ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಯೋಜಕರಾದ ಡಾ. ಕುಮಾರ ಸುಬ್ರಹ್ಮಣ್ಯ ಭಟ್ ಇವರು ಶಿಬಿರಾರ್ಥಿಗಳಿಗೆ ಶಿಬಿರದ ಮಹತ್ವವನ್ನು ತಿಳಿಸಿದರು ಮತ್ತು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮವನ್ನು ಶಿಬಿರಾರ್ಥಿ ಸುಶ್ಮಿತಾ ನಿರೂಪಿಸಿ, ಶಿಬಿರದ ನಾಯಕಿ ಸುಕನ್ಯ ಸ್ವಾಗತಿಸಿ, ಶಿಬಿರಾರ್ಥಿಯಾದ ಸುಕನ್ಯ ವಂದಿಸಿದರು.
ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ: ರಾಷ್ಟೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
RELATED ARTICLES