ಪಂಜ ಶಾಲೆಯ ಪಕ್ಕದಲ್ಲಿರುವ, 30 ವರ್ಷ ಪೂರೈಸಿರುವ ಅಡ್ಡ ರಸ್ತೆಗೆ ಶ್ರೀರಾಮನ ಕಿಂಕರನಾದ ಆಂಜನೇಯನ ಮತ್ತು ಸ್ಥಳಕ್ಕೆ ಸಂಬಂಧಿತ ಕೃಷ್ಣಾಪುರ ಮಠದ ಪ್ರದಾನ ಶಕ್ತಿಯಾದ ಮುಖ್ಯಪ್ರಾಣ ದೇವರ ಹೆಸರನ್ನು ರಸ್ತೆಗೆ ನಾಮಫಲಕವಾಗಿ 19 ಡಿಸೆಂಬರ್ ರಂದು ಅಯೋಧ್ಯೆಯಲ್ಲಿ ಕರಸೇವೆ ಮಾಡಿ ಬಂದಿರುವ ಶ್ರೀಯುತ ಉಮೇಶ್ ಪಂಜ ಇವರು ಅಯೋಧ್ಯೆಯ ಯಜ್ಞಪ್ರಸಾದ ಹಾಕಿ ಅನಾವರಣಗೊಳಿಸಿದರು.
ಈ ರಸ್ತೆಯು ಸುಮಾರು 350 ಮೀಟರ್ ದೂರದವರೆಗೆ ಇದ್ದು ಪ್ರಸ್ತುತ ಎರಡು ಮನೆಗಳನ್ನು ಸಂಪರ್ಕಿಸುತ್ತಿದ್ದು ಮುಂದಿನ ದಿನಗಳಲ್ಲಿ ರಸ್ತೆಯ ಅಭಿವೃದ್ಧಿಯಾಗಿ ಸರ್ವರಿಗೂ ಸಹಕಾರಿಯಾಗಲೆಂದು ಪ್ರಾರ್ಥಿಸಲಾಯಿತು.
ಅನಾವರಣ ಮಾಡುವಾಗ ಜೊತೆಯಲ್ಲಿ ಶ್ರೀ ಸರ್ವಜ್ಞಮೂರ್ತಿ, ಪಾರ್ಥಸಾರಥಿ, ಯೋಗನಿಧಿ ಮತ್ತು ಗಿರೀಶ್ ಉಪಸ್ಥಿತರಿದ್ದರು.