Thursday, September 12, 2024
Homeಅಪರಾಧಉಪ್ಪಿನಂಗಡಿ : ಯುವಕನಿಗೆ ಚೂರಿ ಇರಿತ

ಉಪ್ಪಿನಂಗಡಿ : ಯುವಕನಿಗೆ ಚೂರಿ ಇರಿತ

ಉಪ್ಪಿನಂಗಡಿ: ಬಿಳಿಯೂರು ಗ್ರಾಮದ ಕರ್ವೇಲು ಬಳಿ ಕಾರಿನಲ್ಲಿ ಬಂದ ತಂಡವೊಂದು ಯುವಕನೊಬ್ಬನಿಗೆ ಚೂರಿ ಇರಿದು ಪರಾರಿಯಾದ ಘಟನೆ ನಡೆದಿದೆ. ಕರ್ವೇಲು ಜನತಾ ಕಾಲನಿ ನಿವಾಸಿ 34ರ ಹರೆಯದ ಹಕೀಂ ಎಂಬಾತನಿಗೆ ಚೂರಿಯಿಂದ ಇರಿಯಲಾಗಿದೆ. ಚೂರಿ ಇರಿತಕ್ಕೊಳಗಾದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ವೇಲು ಜಂಕ್ಷನ್ ಬಳಿ ಹಕೀಂ ನಿಂತಿದ್ದ ವೇಳೆ ಧಾವಿಸಿದ ತಂಡ ಚೂರಿಯಿಂದ ಇರಿಯಿತು. ಬಳಿಕ ಅಲ್ಲಿಂದ ಪರಾರಿಯಾಯಿತು ಎಂದು ತಿಳಿದುಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular