ಲಕ್ನೊ: ತಂಗಿಯ ಮದುವೆಗೆ ಗಿಫ್ಟ್ ಕೊಡುವ ವಿಚಾರದಲ್ಲಿ ಪತಿ-ಪತ್ನಿಯ ನಡುವೆ ನಡೆದ ಮನಸ್ತಾಪ ಕೊಲೆಗೆ ಕಾರಣವಾಗಿದೆ. ಚಂದ್ರಪ್ರಕಾಶ್ ಮಿಶ್ರಾ ಎಂಬವರ ತಂಗಿಯ ಮದುವೆ ಏ 26ರಂದು ನಿಗದಿಯಾಗಿತ್ತು. ಈ ಮದುವೆಗೆ ಟಿವಿ ಮತ್ತು ಚಿನ್ನದ ಉಂಗುರ ಕೊಡಬೇಕೆಂಬುದು ಮಿಶ್ರಾರ ಆಸೆಯಾಗಿತ್ತು. ಹೀಗಾಗಿ ಅವರು ಆ ಉಡುಗೊರೆಗಳನ್ನು ತಂದಿದ್ದರು. ಆದರೆ ಅದನ್ನು ನೀಡುವ ವಿಚಾರದಲ್ಲಿ ಮಿಶ್ರಾರ ಪತ್ನಿ ಚಾಬಿಗೆ ಅಸಮಾಧಾನವಿತ್ತು. ಈ ವಿಚಾರದಲ್ಲಿ ನಡೆದ ವಾಗ್ವಾದ ಮನಸ್ತಾಪಕ್ಕೆ ಕಾರಣವಾಗಿತ್ತು. ಪತಿಗೆ ಬುದ್ಧಿ ಕಲಿಸಬೇಕೆಂದು ಚಾಬಿ ವಿಚಾರವನ್ನು ತನ್ನ ಸಹೋದರರಿಗೆ ತಿಳಿಸಿದ್ದಳು. ಇದನ್ನು ಕೇಳಿಸಿಕೊಂಡು ಬಂದ ಆಕೆಯ ಸಹೋದರರು ಮಿಶ್ರಾಗೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಮಿಶ್ರಾರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಇದೀಗ ಪತ್ನಿ ಹಾಗೂ ಆಕೆಯ ಸಹೋದರರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಅಲ್ಲದೆ, ಚಾಬಿ ಸಹಿತ ಐವರನ್ನು ಪೊಲೀಸರು ಬಂಧಿಸಿದ್ದಾರೆ.