ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಾರ್ಯಕ್ರಮವೊಂದರಲ್ಲಿ ಪತ್ನಿ ಬದಲಿಗೆ ಬೇರೊಬ್ಬ ಮಹಿಳೆಗೆ ಕಿಸ್ ಕೊಡಲು ಮುಂದಾದ ಬಗ್ಗೆ ವರದಿಯಾಗಿದೆ. ಕಾರ್ಯಕ್ರಮದಲ್ಲಿ ಜೋ ಬೈಡನ್ ಮಹಿಳೆಯೊಬ್ಬರ ಜೊತೆ ಮಾತನಾಡುತ್ತಿರುತ್ತಾರೆ. ಈ ವೇಳೆ ಆ ಮಹಿಳೆ ತನ್ನ ಪತ್ನಿ ಜಿಲ್ ಬೈಡನ್ ಎಂದು ತಿಳಿದು ಜೋ ಬೈಡನ್ ಮಹಿಳೆಗೆ ಕಿಸ್ ಮಾಡಲು ಮುಂದಾಗುತ್ತಾರೆ. ಆದರೆ ಅಲ್ಲೇ ಇದ್ದ ಜಿಲ್ ಬೈಡನ್ ಮಧ್ಯಪ್ರವೇಶಿಸಿ ಗಂಡನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.
ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 81ರ ಹರೆಯದ ಜೋ ಬೈಡನ್‌ಗೆ ಅರಳು ಮರಳು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಆ ಮಹಿಳೆ ಮತ್ತು ಪತ್ನಿ ನೀಲಿ ಬಣ್ಣದ ಡ್ರೆಸ್ ಹಾಕಿದ್ದು, ಕನ್ಫ್ಯೂಶನ್‌ಗೆ ಕಾರಣ ಎನ್ನಲಾಗುತ್ತಿದೆ.
ಜೋ ಬೈಡನ್ ಅವರಿಗೆ ವಯಸ್ಸಾಗಿರುವುದರಿಂದ ಅಧ್ಯಕ್ಷೀಯ ಚುನಾವಣೆಯಿಂದ ದೂರ ಸರಿಯುವಂತೆ ಅವರಿಗೆ ಪ್ರಮುಖ ನಾಯಕರ ಸಲಹೆಗಳೂ ಬಂದಿದ್ದವು. ಈ ನಡುವೆ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಹೆಸರು ಅಧ್ಯಕ್ಷೀಯ ಚುನಾವಣೆಗೆ ಘೋಷಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ವಿಡಿಯೊ ನೋಡಲು ಇಲ್ಲಿ ಲಿಂಕ್ ಕ್ಲಿಕ್ ಮಾಡಿ…