ಬಂಟ್ವಾಳ : “ಕನ್ನಡ ಭಾಷೆಯ ಇತಿಹಾಸ ಸೊಗಸಾಗಿದೆ. ಕನ್ನಡ ನಾಡು ಸುಂದರವಾಗಿದ್ದು, ಕನ್ನಡಿಗರಾದ ನಾವು ನಾಡು-ನುಡಿಯನ್ನು ಬಳಸಿ, ಬೆಳೆಸಬೇಕಾಗಿದೆ. ಕುವೆಂಪುರವರ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ವೆಂಬ ಮಾತು ನಿಜವಾಗಬೇಕಾದರೆ ಭಾಷೆಯ ಸಮರ್ಥ ಬಳಕೆಯಾಗಬೇಕು” ಎಂದು ಬಂಟ್ವಾಳದ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ಶಿಕ್ಷಕಿ ಅನಿತಾ ಡಿಸೋಜ ಹೇಳಿದರು.
ಅವರು ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ದೀಪ ಬೆಳಗಿಸಿ ಮಾತನಾಡಿದರು.
ಪ್ರಾಂಶುಪಾಲೆ ಜೂಲಿ ಟಿ.ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಪೂರ್ಣೇಶ್ವರಿ ಭಟ್ ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾದರು. ಕನ್ನಡ ಭಾಷೆಯ, ಕನ್ನಡ ನಾಡಿನ ಕುರಿತು ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಸಾಹಿತ್ಯ ಸಂಘದ ಕಾರ್ಯದರ್ಶಿ ಪ್ರಾಪ್ತಿ ಆಳ್ವ, ಜೊತೆ ಕಾರ್ಯದರ್ಶಿ ಭವಿಶ್ ಕಾರ್ಯಕ್ರಮ ನಿರ್ವಹಿಸಿದರು.