Monday, December 2, 2024
Homeರಾಜ್ಯಜರ್ಮನಿ ಪಾರ್ಲಿಮೆಂಟ್‌ ಪುಸ್ತಕದಲ್ಲಿ ಸ್ಪೀಕರ್‌ ಯು.ಟಿ. ಖಾದರ್‌ ಸಹಿ | ಶಾಸಕ ಉಮಾನಾಥ ಕೋಟ್ಯಾನ್‌, ಅಶೋಕ್‌...

ಜರ್ಮನಿ ಪಾರ್ಲಿಮೆಂಟ್‌ ಪುಸ್ತಕದಲ್ಲಿ ಸ್ಪೀಕರ್‌ ಯು.ಟಿ. ಖಾದರ್‌ ಸಹಿ | ಶಾಸಕ ಉಮಾನಾಥ ಕೋಟ್ಯಾನ್‌, ಅಶೋಕ್‌ ಕುಮಾರ್‌ ರೈ ಉಪಸ್ಥಿತಿ

ಬರ್ಲಿನ್: ಜರ್ಮನ್ ಪ್ರವಾಸದಲ್ಲಿರುವ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮತ್ತು ಅವರ ನಿಯೋಗ ಜರ್ಮನಿಯ ಮ್ಯೂನಿಚ್ ನಲ್ಲಿರುವ ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಗೆ ಭೇಟಿ ನೀಡಿದೆ. ಈ ವೇಳೆ ಅಲ್ಲಿನ ಪಾರ್ಲಿಮೆಂಟ್ ವಿಚಾರಗಳನ್ನು ತಿಳಿದುಕೊಂಡ ನಿಯೋಗವು, ಔತಣಕೂಟದಲ್ಲೂ ಪಾಲ್ಗೊಂಡಿತು. ಅಲ್ಲದೆ, ಪಾರ್ಲಿಮೆಂಟ್ ವಿಐಪಿ ಭೇಟಿದಾರರ ಪುಸ್ತಕದಲ್ಲಿ ಯು.ಟಿ. ಖಾದರ್ ಸಹಿ ಮಾಡುವ ಮೂಲಕ ಇತಿಹಾಸ ಬರೆದರು.
ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಅಧ್ಯಕ್ಷ ಐಲ್ಸ್ ಏಗ್ನರ್ ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದರು. ಯು.ಟಿ. ಖಾದರ್ ಅವರ ಜೊತೆಗೆ ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಉಮಾನಾಥ ಕೋಟ್ಯಾನ್, ಅಶೋಕ್ ಕುಮಾರ್ ರೈ, ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.
ಕರ್ನಾಟಕ ವಿಧಾನಸಭೆಗೆ ಜರ್ಮನಿ ಪಾರ್ಲಿಮೆಂಟ್ ನಿಯೋಗವು 2025 ಫೆಬ್ರವರಿಯಲ್ಲಿ ಭೇಟಿ ನೀಡಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಮಾಹಿತಿ ನೀಡಿದ್ದಾರೆ. ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಅಧ್ಯಕ್ಷ ಐಲ್ಸ್ ಏಗ್ನರ್ ಅವರು ಜರ್ಮನಿ ಪ್ರವಾಸದಲ್ಲಿರುವ ಕರ್ನಾಟಕ ಸ್ಪೀಕರ್ ಅವರ ನಿಯೋಗದ ಜೊತೆಗೆ ಚರ್ಚಿಸಿ ಭಾರತದ ಪ್ರಜಾಪ್ರಭುತ್ವ, ಭೌಗೋಳಿಕ ಹಾಗೂ ಸಂಸದೀಯ ಇತಿಹಾಸದ ಕುರಿತು ಮಾಹಿತಿ ಪಡೆದರು.
ಈ ಸಂದರ್ಭ ನಿಯೋಗಕ್ಕೆ ಅವರು ಸೌಹಾರ್ದ ಔತಣಕೂಟ ಏರ್ಪಡಿಸಿದರು. ನಿಯೋಗವು ಜರ್ಮನಿ ಪ್ರತಿನಿಧಿಗಳನ್ನು ರಾಜ್ಯಕ್ಕೆ ಆಹ್ವಾನಿಸಿತು.

RELATED ARTICLES
- Advertisment -
Google search engine

Most Popular