Thursday, September 12, 2024
Homeಉಡುಪಿಮಾ.19 ರಿಂದ ವಡಭಾಂಡೇಶ್ವರ ಬಲರಾಮನಿಗೆ ಮತ್ತೆ ಪ್ರತಿಷ್ಠಾ ಬ್ರಹ್ಮಕಲಶ

ಮಾ.19 ರಿಂದ ವಡಭಾಂಡೇಶ್ವರ ಬಲರಾಮನಿಗೆ ಮತ್ತೆ ಪ್ರತಿಷ್ಠಾ ಬ್ರಹ್ಮಕಲಶ

ಮಲ್ಪೆ: ವಡಭಾಂಡೇಶ್ವರ ಬಲರಾಮ ದೇವಸ್ಥಾನ ಈಗ ಜೀಣೋದ್ದಾರಗೊಳ್ಳುತ್ತಿದ್ದು ಇದೇ ಮಾ. 19ರಿಂದ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ.

ಮಾ.22 ರಂದು ಶುಕ್ರವಾರ ಶ್ರೀ ದೇವರ ಪುನಃ ಪ್ರತಿಷ್ಠೆ ನಡೆಯಲಿದೆ. ಮಾ.25 ರಂದು ಸೋಮವಾರ ಅಷ್ಟಬಂಧ ಬ್ರಹ್ಮಕಲಶೋತ್ಸ, ಮಾ. 27 ರಂದು ಬುಧವಾರ ಮನ್ಮಹಾರಥೋತ್ಸವ ನಡೆಯಲಿದೆ.

19-3-2024 ರಿಂದ 26-3-2024 ರ ವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ. 22-3-2024 ರಿಂದ 2-3-2024 ರ ವರೆಗೆ ಮಹಾ ಅನ್ನಸತರ್ಪಣೆ ನಡೆಯಲಿದೆ.

ವಡಭಾಂಡ ಎಂಬ ಮಹರ್ಷಿಯೊಬ್ಬರು ತಪಸ್ಸನ್ನಾಚರಿಸುತ್ತಿದ್ದ ಪುಣ್ಯ ಭೂಮಿಯಲ್ಲಿಈ ಮಹರ್ಷಿಗೆ ಮಹಾ ವ್ಯಾಧಿ ಬಾಧಿಸುತ್ತದೆ. ಇದರ ಪರಿಹಾರಾರ್ಥ ಸುಬ್ರಹ್ಮಣ್ಯ ದೇವರನ್ನು ಆರಾಧಿಸುತ್ತಾರೆ. ವ್ಯಾಧಿ ಮುಕ್ತರಾದ ಬಳಿಕ ಸುಬ್ರಹ್ಮಣ್ಯ ದೇವರನ್ನು ಪ್ರತಿಷ್ಠಾಪಿಸುತ್ತಾರೆ. ಹೀಗೆ ವಡಭಾಂಡ ಮಹರ್ಷಿಯಿಂದ ಸಂಕಲ್ಪಿತ ಪುಣ್ಯಕ್ಷೇತ್ರವೇ ವಡಭಾಂಡೇಶ್ವರ ಎಂದಾಯಿತು.

ಹಡಗಿನಲ್ಲಿದ್ದ ಮೂರು ಮಣ್ಣಿನ (ಗೋಪಿಯ) ದೊಡ್ಡ ಮುದ್ದೆ ಮಾತ್ರ ಪಡೆಯುತ್ತಾರೆ. ಈ ಮೂರು ಮಣ್ಣಿನ ಉಂಡೆ ಅಥವಾ ಮುದ್ದೆಯೊಂದಿಗೆ ಉಡುಪಿಗೆ ಮರಳುವಾಗ ಒಂದು ಮುದ್ದೆ ಕೆಳಗೆ ಉರುಳಿ ಬೀಳುತ್ತದೆ, ಒಡೆದು ಒಳಗಿದ್ದ ಸುಂದರ ಮೂರ್ತಿ ಗೋಚರಿಸುತ್ತದೆ. ಅದೇ ಬಲರಾಮ ಮೂರ್ತಿ, ಮಣ್ಣಿನ (ಗೋಪಿಯ) ಮೂರ್ತಿ ಬಿದ್ದ ಸ್ಥಳದಲ್ಲಿ ಆ ಮೂರ್ತಿ ಪ್ರತಿಷ್ಠಾಪಿಸುತ್ತಾರೆ.

ಉಳಿದೆರಡು ಮುದ್ದೆಗಳಲ್ಲಿ ಒಂದು ಉಡುಪಿಯ ಶ್ರೀಕೃಷ್ಣ ಅಷ್ಟಮಠಾಧೀಶರಿಂದ ಪೂಜೆಗೊಳ್ಳುವ ಮಧ್ವಾಚಾರ್ಯರ ಮಂಗಳಭೂಮಿಯ ಆರಾಧ್ಯ ದೇವರು. ಇನ್ನೊಂದು ಜನಾರ್ದನ ಪ್ರತಿಮೆ ಎನ್ನಲಾಗುತ್ತದೆ. ಈ ಜನಾರ್ದನ ಪ್ರತಿಮೆಯನ್ನು ಎರ್ಮಾಳಿನ ದೇಗುಲಕ್ಕೆ ಸ್ವತಃ ಆಚಾರ್ಯರೇ ಕೊಡುತ್ತಾರೆ ಎಂಬುದು ಒಂದು ನಂಬಿಕೆ.

ಗರ್ಭಗುಡಿ: ಪೂರ್ವಭಿಮುಖವಾಗಿರುವ ಇಲ್ಲಿನ ಗರ್ಭಗುಡಿಯ ಅಧಿಷ್ಠಾನವು ಪಾದಬಂಧ ಕ್ರಮದಲ್ಲಿದೆ. ಭಿತ್ತಿಯು ಶಾಸ್ತ್ರೀಯ ಕ್ರಮದ ನಿರ್ಮಿತಿ,ಭಿತ್ತಿಯು ಭಿತ್ತಿಸ್ತಂಭ, ಘನದ್ವಾರಗಳಿಂದ ಅಲಂಕೃತವಾಗಿದೆ. ಗರ್ಭಗುಡಿಯ ಮುಂಭಾಗದ ಭಿತ್ತಿಯಲ್ಲಿ ಇಕ್ಕೆಲಗಳಲ್ಲಿ ಅಲಂಕಾರಿಕವಾಗಿ ನವಿಲಿನ ಉಬ್ಬು ಚಿತ್ರವಿದೆ. ದ್ವಾರದಲ್ಲಿ ದ್ವಾರದೇವತೆಗಳು ಉಬ್ಬಿಕಾಣುವಂತೆ ಕೆತ್ತಿ ಶಿಲ್ಪಗಳಿವೆ. ಗುಡಿಯ ಸುತ್ತಲೂ ಹನ್ನೆರಡು ಶಿಲಾ ಸ್ತಂಭಗಳು ಇವೆ.

ತೀರ್ಥಮಂಟಪ: ತೀರ್ಥಮಂಟಪವು ಏಕತಲದ ರಚನೆ, ಅಧಿಷ್ಠಾನವು ಪಾದಬಂಧ ಕ್ರಮದಲ್ಲಿದೆ. ಹದಿನಾರು ಕಂಬಗಳಿರುವ ವಿಭಿನ್ನ ಶೈಲಿಯ ತೀರ್ಥಮಂಟಪ ಇದಾಗಿದೆ. ನಾಲ್ಕು ಕಂಬಗಳು ಮಂಟಪದ ಒಳಸುತ್ತಿನಲ್ಲಿವೆ. ಒಳಸುತ್ತಿನ ನೈಋತ್ಯ ದಿಕ್ಕಿನಲ್ಲಿರುವ ಕಂಬದಲ್ಲಿ ಗಣಪತಿಯ ಉಬ್ಬು ಶಿಲ್ಪವಿದೆ. ವಾಯುವ್ಯ ದಿಕ್ಕಿನ ಕಂಬದಲ್ಲಿ ಅನ್ನಪೂರ್ಣೇಶ್ವರಿ (ದುರ್ಗೆ)ಯ ಉಬ್ಬು ಶಿಲ್ಪವಿದೆ.

ಅಗ್ರಸಭೆ: ತೀರ್ಥಮಂಟಪಕ್ಕಿಂತ ಮುಂಭಾಗದ ಕಟ್ಟಡ. ದೇವಳ ಒಳಪ್ರವೇಶದ ನಡೆಯ ಎರಡು ಬದಿಯಲ್ಲಿರುವ ಚಾವಡಿಯಂತಹ ನಿರ್ಮಾಣವೇ ಅಗ್ರಸಭೆ.

RELATED ARTICLES
- Advertisment -
Google search engine

Most Popular