ಕಿನ್ನಿಗೋಳಿ: ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ದೇವಾಲಯದಲ್ಲಿ ಆದಿತ್ಯವಾರ ಬೆಳಗಿನ ಪೂಜೆಯ ಬಳಿಕ 75 ವರ್ಷ ಪೂರೈಸಿ ವರ್ಷದ ವಿವಿಧ ತಿಂಗಳಿನಲ್ಲಿ ಆಚರಿಸುವ ಜನ್ಮದಿನದ ವಜ್ರ ಮಹೋತ್ಸವದ ಕಾರ್ಯಕ್ರಮ ದೇವಾಲಯದಲ್ಲಿ ನಡೆಯಿತು.
ವಜ್ರಮೋತ್ಸವದ ಕೃತಜ್ಞತಾ ಬಲಿಪೂಜೆಯು ಬಳ್ಳಾರಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ಬಿಷಪ್ ಹೆನ್ರಿ ಡಿಸೋಜ ತಮ್ಮ ಹುಟ್ಟೂರಿನಲ್ಲಿ ಅರ್ಪಿಸಿದರು.
ಇದೇ ಸಂದರ್ಭ ಜನ್ಮದಿನದ ವಜ್ರ ಮಹೋತ್ಸವ ಆಚರಿಸುವ ಉಡುಪಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರು ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ಬಿಷಪ್ ಹೆನ್ರಿ ಡಿಸೋಜ, ಎರ್ಮಾಳ್ ದೇವಾಲಯದ ಪ್ರಧಾನ ಧರ್ಮಗುರುಗಳು ಫಾ.ಜೆಸ್ವಿ ಫೆರ್ನಾಂಡಿಸ್ , ಪಿಲಾರ್ ದೇವಾಲಯದ ಧರ್ಮಗುರುಗಳು ಫಾ. ಜಾನ್ ಅಲ್ಪ್ರೆಡ್ ಬರ್ಬೋಜ, ವಲೇರಿಯನ್ ಡಿಸೋಜ ಹೆನ್ರಿ ಮಥಾಯಸ್ ವಜ್ರ ಮಹೋತ್ಸವ ಸಂದರ್ಭದಲ್ಲಿ ಗೌರವಿಸಲಾಯಿತು.
ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಧರ್ಮದೇಕ್ಷರು ಬಿಸೊಪ್ ಅಲೋಶಿಯಸ್ ಪಾವ್ಲ್ ಡಿಸೋಜಾ, ಕಿನ್ನಿಗೋಳಿ ದೇವಾಲಯದ ಪ್ರಧಾನ ಧರ್ಮ ಗುರುಗಳು ಫಾ. ಜಾಕಿಮ್ ಫೆರ್ನಾಂಡಿಸ್, ಫಾ. ಸ್ಟೀವನ್ ಕುಟಿನ್ನು, ಫಾ ಲ್ಯಾನ್ಸಿ, ಪಾಲನ ಮಂಡಳಿಯ ಉಪಾಧ್ಯಕ್ಷರಾದ ವಿಲಿಯಂ ಕಾರ್ಯದರ್ಶಿ, ಮೈಕಲ್, ಮತ್ತಿತರರು ಉಪಸ್ಥಿತರಿದ್ದರು.