Thursday, April 24, 2025
Homeಬಂಟ್ವಾಳವಾಮದ ಪದವು ಸರಕಾರಿ ಪ್ರೌಢ ಶಾಲಾ 10 ನೇ ತರಗತಿ ಮಕ್ಕಳ ಉಚಿತ ಟ್ಯೂಷನ್ ತರಗತಿ...

ವಾಮದ ಪದವು ಸರಕಾರಿ ಪ್ರೌಢ ಶಾಲಾ 10 ನೇ ತರಗತಿ ಮಕ್ಕಳ ಉಚಿತ ಟ್ಯೂಷನ್ ತರಗತಿ ಸಮಾರೋಪ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಳ ತಾಲೂಕಿನ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ವಾಮದ ಪದವು ಸರಕಾರಿ ಪ್ರೌಢ ಶಾಲಾ 10 ನೇ ತರಗತಿ ಮಕ್ಕಳಿಗೆ ಉಚಿತವಾಗಿ 3 ತಿಂಗಳು ನೀಡಿದ ಟ್ಯೂಷನ್ ತರಗತಿಯ ಸಮಾರೋಪ ಕಾರ್ಯಕ್ರಮ ಗುರುವಾರ ನಡೆಸಲಾಯ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ವಹಿಸಿದ್ದರು.

ಗ್ರಾಮಾಭಿವೃದ್ಧಿಯೋಜನೆಯ ಬಂಟ್ವಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ದೀಪ ಪ್ರಜ್ವಲನೇ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಜ್ಞಾನವಿಕಾಸ ಕಾರ್ಯಕ್ರಮ ಮಾತೃಶ್ರೀ ಹೇಮಾವತಿ ಅಮ್ಮನ ಒಂದು ಪ್ರೀತಿಯ ಕಾರ್ಯಕ್ರಮ.ಈ ಕಾರ್ಯಕ್ರಮದಲ್ಲಿ ಟ್ಯೂಷನ್ ಕ್ಲಾಸ್ ಕೂಡ ಒಂದು ಕಾರ್ಯಕ್ರಮವಾಗಿದೆ. ಯೋಜನೆಯ ಮೂಲಕ ಶಿಕ್ಷಣಕ್ಕೆ ಒತ್ತು ನೀಡುವ ಹಲವಾರು ಕಾರ್ಯಕ್ರಮವಿದ್ದು ಶಾಲೆಗೆ ಸಂಬಂಧ ಪಟ್ಟು ಸುಜ್ಞಾನನಿಧಿ, ಜ್ಞಾನದೀಪ ಶಿಕ್ಷಕರ ಒದಗಿಸುವಿಕೆ , ಬೆಂಚು ಡೆಸ್ಕ್ ವಿತರಣೆ, ಟ್ಯೂಷನ್ ಕ್ಲಾಸ್ ಇಷ್ಟೆಲ್ಲ ಮಕ್ಕಳಿಗೋಸ್ಕರ ಮಾಡಲಾಗಿದೆ.
ವಿದ್ಯೆಯ ಜೊತೆಗೆ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಕೂಡ ಇರಬೇಕು ಎಂದರು. ಈ ಸಂದರ್ಭ ಮಕ್ಕಳಿಗೆ ಮಕ್ಕಳಿಗೆ ಪೆನ್ನು ವಿತರಣೆ ಮಾಡಲಾಯಿತು. ಟ್ಯೂಷನ್ ಪಡೆದು ಕೊಂಡ ಮಕ್ಕಳು ಅನಿಸಿಕೆಯನ್ನು ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ವಗ್ಗ ವಲಯದ ಜನಜಾಗ್ರತಿ ವೇದಿಕೆಯ ಸದಸ್ಯ ನವೀನ್ ಚಂದ್ರ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ, ಶಿಕ್ಷಕ ವೃಂದ, ಹತ್ತನೇ ತರಗತಿ ವಿದ್ಯಾರ್ಥಿಗಳು,
ಸೇವಾಪ್ರತಿನಿಧಿ ಮೋಹನ್ ದಾಸ್,ಕೇಂದ್ರದ ಸಾಯೋಜಕಿ ಗುಣವತಿ,ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿ,ಮುಖ್ಯ ಶಿಕ್ಷಕ ಬಾಲಕೃಷ್ಣ ಸ್ವಾಗತಿಸಿ,
ಸಹ ಶಿಕ್ಷಕ ಸುಧಾಕರ್ ವಂದಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ತಾಲೂಕು ಸಮನ್ವಯಧಿಕಾರಿ ಶ್ರುತಿ ಕಾರ್ಯಕ್ರಮ ನಿರೂಪಿಸಿದಾರು.

RELATED ARTICLES
- Advertisment -
Google search engine

Most Popular