ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಗ್ರಾಮ ಪಂಚಾಯತ್ ಪಡುಪಣಂಬೂರು,
ತಾಲೂಕು ಮತ್ತು ಜಿಲ್ಲಾ ಯುವ ಜನ ಒಕ್ಕೂಟ, ದ. ಕ. ಜಿಲ್ಲೆ, ಇವರುಗಳ ಮಾರ್ಗದರ್ಶನದಲ್ಲಿ ರೋಟರಿ ಕ್ಲಬ್, ಬೈಕಂಪಾಡಿ ಹಾಗೂ ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು 2021 ನೇ ಸಾಲಿನ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ), ತೋಕೂರು, ಹಳೆಯಂಗಡಿ. ಇವರುಗಳ ಜಂಟಿ ಆಶ್ರಯದಲ್ಲಿ, ಜುಲೈ 4 ರವಿವಾರ ಬೆಳಿಗ್ಗೆ 09.00 ಗಂಟೆಯಿಂದ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವು ಸಂಸ್ಥೆಯ ಸದಸ್ಯರಾದ ಶ್ರೀ ಚಂದ್ರ ಸುವರ್ಣ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಅಭಿಮಾನಿ ಬಳಗ ಇದರ ಮುಖ್ಯಸ್ಥರಾದ ವಾಲ್ಟರ್ ಡಿ’ಸೋಜಾ ಇವರು ದೀಪ ಬೆಳಗಿಸುವ ಮೂಲಕ ಹಾಗೂ ಸಸಿಗೆ ನೀರೆರೂವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು ಭಾರತದಲ್ಲಿ ಮಾನ್ಸೂನ್‌ಗಳ ಹೊರಹೊಮ್ಮುವಿಕೆಯು ಸಾಮಾನ್ಯವಾಗಿ ಜುಲೈ ಮೊದಲ ವಾರದಲ್ಲಿ ಪ್ರಾರಂಭವಾಗುತ್ತದೆ.
ಅದಕ್ಕಾಗಿಯೇ ದೇಶವು ಈ ನಿರ್ದಿಷ್ಟ ತಿಂಗಳಲ್ಲಿ ವನ ಮಹೋತ್ಸವವನ್ನು ಆಚರಿಸುತ್ತದೆ. ಈ ಅವಧಿಯಲ್ಲಿ ನೆಟ್ಟ ಹೆಚ್ಚಿನ ಸಂಖ್ಯೆಯ ಸಸಿಗಳು ಇತರ ತಿಂಗಳುಗಳಲ್ಲಿ ನೆಡುವುದಕ್ಕಿಂತ ಹೆಚ್ಚಿನ ಬದುಕುಳಿಯುವಿಕೆಯ ಪ್ರಮಾಣವನ್ನು ಹೊಂದಿವೆ ಹಾಗೂ ಈ ಹಬ್ಬದ ನೆನಪಿಗಾಗಿ, ಜನರು ಸಾಮಾನ್ಯವಾಗಿ ಸ್ಥಳೀಯ ಮರಗಳನ್ನು ನೆಡುತ್ತಾರೆ, ಸ್ಥಳೀಯ ಪರಿಸ್ಥಿತಿಗಳಿಗೆ ತಮ್ಮ ಹೊಂದಾಣಿಕೆಯನ್ನು ಪರಿಗಣಿಸುತ್ತಾರೆ.
ಸ್ಥಳೀಯ ಮರಗಳು ಸಹ ಸೂಕ್ತವಾದ ಆಯ್ಕೆಯಾಗಿದೆ ಏಕೆಂದರೆ ಅವು ಪ್ರಾಣಿಗಳು, ಪಕ್ಷಿಗಳು, ಕೀಟಗಳು ಮತ್ತು ಇತರ ಜೀವಿಗಳಿಗೆ ಆಶ್ರಯವನ್ನು ನೀಡುತ್ತವೆ. ಹೆಚ್ಚಿನ ಪ್ರೋತ್ಸಾಹಕ್ಕಾಗಿ, ನಾಗರಿಕ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳು ಶಾಲೆಗಳು, ಕಾಲೇಜುಗಳು, ಎನ್‌ಜಿಒಗಳು ಮತ್ತು ಇತರ ಸಂಸ್ಥೆಗಳಿಗೆ ಸಸಿಗಳನ್ನು ನೀಡುತ್ತವೆ ಎಂದು ಹೇಳಿದರು.
ವನಮಹೋತ್ಸವ ಸಂಚಾಲಕರು ಆಗಿರುವ ರೋ. ಕುಮಾರ್ ಕುಳಾಯಿ ಅವರ ಅನುಪಸ್ಥಿತಿಯಲ್ಲಿ ವಲಯ ಸೇನಾನಿ ರೋಟರಿ ಕ್ಲಬ್ ಬೈಕಂಪಾಡಿ ಇದರ ರೋ. ಗಣೇಶ್.ಎಮ್ ಅವರು ಸಭಿಕರಲ್ಲಿ ಹಲವರಿಗೆ ಸಾಂಕೇತಿಕವಾಗಿ ಸಸಿಗಳ ವಿತರಣೆ ಮಾಡಿ, ಮಾತನಾಡಿ ಗಿಡಮರಗಳನ್ನು ಉಳಿಸಿ ಬೆಳೆಸುವುದು ಬಹಳ ಅಗತ್ಯವಾಗಿದೆ ಎಂದು ವನಮಹೋತ್ಸವ ಆಚರಣೆಯ ಮಹತ್ವ ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಪಡುಪಣಂಬೂರು ಗ್ರಾಮ ಪಂಚಾಯತ್ ಇದರ ಉಪಾಧ್ಯಕ್ಷರಾದ ಹೇಮನಾಥ ಅಮೀನ್ ವನಮಹೋತ್ಸವವು ಭೂಮಿ ತಾಯಿಯನ್ನು ಪ್ರೀತಿಸುವವರಿಗೆ ಮತ್ತು ಅಜ್ಞಾನಿಗಳಿಗೆ ಸಹ ಆಗಿದೆ ಏಕೆಂದರೆ ಅವರು ಉತ್ತಮ ಪರಿಸರ, ಸುಂದರ ಹವಾಮಾನ ಮತ್ತು ಆಹ್ಲಾದಕರ ಹವಾಮಾನದ ನಡುವಿನ ನೈಸರ್ಗಿಕ ಸಮತೋಲನವನ್ನು ಆನಂದಿಸುತ್ತಾರೆ. ಈ ಹಬ್ಬವನ್ನು ಆಚರಿಸುವುದು ಭಾರತ ಮತ್ತು ಪ್ರಪಂಚದಾದ್ಯಂತದ ಹಸಿರನ್ನು ಹೆಚ್ಚಿಸಲು ಗಣನೀಯವಾಗಿ ಕೊಡುಗೆ ನೀಡಲು ನೇರವಾಗಿ ಸಂಬಂಧಿಸಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ತಾನಿ ಶಾಲೆ ತೋಕೂರು ಇಲ್ಲಿನ ಮುಖ್ಯ ಶಿಕ್ಷಕಿ ವನಿತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋ. ಹರೀಶ್ ಬಿ. ಶೆಟ್ಟಿ, ಅಧ್ಯಕ್ಷರು ರೋಟರಿ ಕ್ಲಬ್, ಬೈಕಂಪಾಡಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಜುಲೈ ಮೊದಲ ವಾರದಲ್ಲಿ ವನಮಹೋತ್ಸವ ಸಪ್ತಾಹವನ್ನು ಆಚರಿಸಲಾಗುತ್ತದೆ ಮತ್ತು ದೇಶದಾದ್ಯಂತ ಸಸಿ ನೆಡುವ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತದೆ. ಭಾರತವು 2030 ರ ವೇಳೆಗೆ ಹೆಚ್ಚುವರಿ 2 ಶತಕೋಟಿ ಕಾರ್ಬನ್ ಸೀಕ್ವೆಸ್ಟ್ರೇಶನ್ ಅನ್ನು ರಚಿಸುವ ಗುರಿಯನ್ನು ಹೊಂದಿದೆ.
ವನಮಹೋತ್ಸವದಲ್ಲಿ ಜನರು ಸಸಿಗಳನ್ನು ನೆಡುತ್ತಾರೆ ಮತ್ತು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುತ್ತಾರೆ ಮತ್ತು ವಿವಿಧ ಸಸಿ ನೆಡುವ ಅಭಿಯಾನಗಳನ್ನು ಸಹ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಸ್ಪೋರ್ಟ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಬೇಕಲ್, ಅಧ್ಯಕ್ಷರಾದ ದೀಪಕ್ ಸುವರ್ಣ, ಮಹಿಳಾ ಕಾರ್ಯಾಧ್ಯಕ್ಷೆ ಯಶೋದಾ ದೇವಾಡಿಗ ಹಾಗೂ ಪರಿಸರ ಸಂರಕ್ಷಣಾ ಕಾರ್ಯದರ್ಶಿ ಚಂದ್ರಶೇಖರ್ ದೇವಾಡಿಗ ವೇದಿಕೆಯಲ್ಲಿ ಆಸೀನರಾಗಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇಲ್ಲಿನ ಸದಸ್ಯರಾದ ಮೋಹನ್ ದಾಸ್, ಸಂತೋಷ್ ಕುಮಾರ್, ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಇಲ್ಲಿನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪಿ.ಸಿ ಕೋಟ್ಯಾನ್, ನಿಕಟ ಪೂರ್ವ ಸದಸ್ಯರಾದ ಯೋಗೀಶ್ ಕೋಟ್ಯಾನ್, ಯುವಕ ಸಂಘ (ರಿ)ತೋಕೂರು ಇಲ್ಲಿನ ಅಧ್ಯಕ್ಷರಾದ ರಮೇಶ್ ದೇವಾಡಿಗ, ರೋಟರಿ ಕ್ಲಬ್ ಬೈಕಂಪಾಡಿ ಇಲ್ಲಿನ ರೋ. ಶ್ರೀಕಾಂತ್ ಶೆಟ್ಟಿ ಬಾಳ, ರೋ. ಗಂಗಾಧರ್ ಬಂಜನ್, ರೋ. ದಿನೇಶ್ ಬಂಗೇರ, ರೋ. ನೂತನ ಶೆಟ್ಟಿ, ಹಿರಿಯ ಕೃಷಿಕರಾದ ಜಯ ಶೆಟ್ಟಿ, ತೋಕೂರು ಸ್ಪೋರ್ಟ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ, ಜಂಟಿ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು , ಸದಸ್ಯೆಯರು, ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ದೀಪಕ್ ಸುವರ್ಣ ಪ್ರಾಸ್ತಾವಿಕ ನುಡಿಗಳಲ್ಲಿ ಅತಿಥಿಗಳನ್ನು ಸ್ವಾಗತಿಸಿದರು. ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸುನಿಲ್ ದೇವಾಡಿಗ, ಹಾಗೂ ಜೊತೆ ಕಾರ್ಯದರ್ಶಿ ಸುರೇಖಾ ಸಹಕರಿಸಿದರು. ರೋಟರಿ ಕ್ಲಬ್ ಬೈಕಂಪಾಡಿ ಇದರ ಮಾಜಿ ಅಧ್ಯಕ್ಷರಾದ ರೋ. ಅಶೋಕ್.ಎನ್ ವಂದಿಸಿದರು. ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ರೋಟರಿ ಕ್ಲಬ್ ಬೈಕಂಪಾಡಿ ಅವರ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.