ಮಂಗಳೂರು: ಸುರತ್ಕಲ್ ಕುಲಾಲ ಸಂಘ (ರಿ.), ಕುಲಾಲ ಮಹಿಳಾ ಮಂಡಲ, ತಡಂಬೈಲ್ ಸುರತ್ಕಲ್ ವತಿಯಿಂದ ಆ.16ರಂದು ಮಧ್ಯಾಹ್ನ 2ರಿಂದ 31ನೇ ವರ್ಷದ ವರಮಹಾಲಕ್ಷ್ಮಿ ಪೂಜೆ ನಡೆಯಲಿದೆ. ಕುಲಾಲ ಭವನದಲ್ಲಿ ಈ ಪೂಜೆ ಆಯೋಜಿಸಲಾಗಿದೆ. ಆ ಪ್ರಯುಕ್ತ ಸಮುದಾಯದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವರಮಹಾಲಕ್ಷ್ಮಿ ದೇವಿಯ ಪ್ರಸಾದ ಸ್ವೀಕರಿಸಬೇಕು ಎಂದು ಕುಲಾಲ ಮಹಿಳಾ ಮಂಡಲದ ಅಧ್ಯಕ್ಷೆ ನೇತ್ರ ದಿನೇಶ್, ಉಪಾಧ್ಯಕ್ಷೆ ಭಾರತಿ ಬಾಬುಚಂದ್ರ, ಮಮತಾ ಯಶೋಧರ್, ಪದ್ಮಕೃಷ್ಣ ಮುಂತಾದವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪೂಜೆ ಮಾಡಲಿಚ್ಚಿಸುವವರು ರೂ. 120 ಕೊಟ್ಟು ರಶೀದಿ ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.