ಉಡುಪಿ: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆ 26 ಸೋಮವಾರ ಶ್ರೀಕೃಷ್ಣ ಕುರಿತು ಕಥೆ , ಲೇಖನ , ಚಿತ್ರ ಕಲೆ , ಶ್ರೀ ಕೃಷ್ಣ ನಾಮವಾಳಿ , ಬಾಲ ಲೀಲೆಯ ಕುರಿತು ವಿವಿಧ ಸ್ಪರ್ಧೆ ವಾಸುದೇವ ಕೃಪಾ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ ಬೈಲೂರು ಉಡುಪಿ ಯಲ್ಲಿ ನಡೆಯಿತು. ಸಮಾರಂಭ ವೇದಿಕೆಯಲ್ಲಿ ಕಾರ್ಯಕ್ರಮದ ಪ್ರಾಯೋಜಕತ್ವ ನೀಡಿದ ಜಯಂಟ್ಸ್ ಸಂಸ್ಥೆಯ ಕೋಶಾಧಿಕಾರಿ ದಿವಾಕರ್ ಪೂಜಾರಿ , ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಯಾನಂದ ಕೋಟ್ಯಾನ್ , ನಿವೃತ್ತ ಮುಖ್ಯೋಪಾಧ್ಯಾಯಿನಿ ಕಲ್ಯಾಣಿ ಪೈ ,ಚಂದ್ರಕಲಾ ಕಾಮತ್ , ರೇಖಾ ಪೈ , ಉಪಸ್ಥರಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ , ದ್ವಿತೀಯ ,ಬಹುಮಾನ ಗಳನ್ನು ಕಾರ್ಯಕ್ರಮದ ಸಂಯೋಜಕರಾದ ದೇವದಾಸ್ ಕಾಮತ್ ವಿತರಿಸಿದರು. , ಸ್ಪರ್ಧೆಯಲ್ಲಿ ಭಾಗ ವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಮುಖ್ಯ ಶಿಕ್ಷಕಿ ಶ್ರೀಮತಿ ನಿಷಾ ಸ್ವಾಗತಿಸಿದರು. ಶಿಕ್ಷಕ ರಕ್ಷಕ ಸಂಘದ ಸಮಿತಿಯ ಸದಸ್ಯರು , ಶಾಲಾ ಶಿಕ್ಷಕಿಯರೂ , ವಿದ್ಯಾರ್ಥಿಗಳು , ಪೋಷಕರು ಉಪಸ್ಥರಿದ್ದರು.