ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ಸ್ವಾಮಿ ದೇವಸ್ಥಾನ 2024 ನವೆಂಬರ್ 22 ಶುಕ್ರವಾರದಿಂದ 24 ಆದಿತ್ಯವಾರದವರೆಗೆ ಶ್ರೀಕಾಲಭೈರವ ಜಯಂತಿಯ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ 2024 ನವೆಂಬರ್ 22ನೇ ಶುಕ್ರವಾರ ಸಂಜೆ ಕಟಪಾಡಿಯಿಂದ ಕಾಲಭೈರವ ಸ್ವಾಮಿಗೆ ಬೆಳ್ಳಿ ಕವಚ ಹಾಗೂ ಹೊರಕಾಣಿಕೆ ಮೆರವಣಿಗೆಯೊಂದಿಗೆ ಸಾಗಿ ಬರಲಿದೆ 23ನೇ ಶನಿವಾರ ಬೆಳಗ್ಗೆ ಗಣ ಹೋಮ ಕಲಶಾಭಿಷೇಕ 10ಗಂಟೆಗೆ ಅಘೋರ ಅಖಾಡ್ ನ ಅಘೋರಿಗಳಿಂದ ಅಘೋರ ಭೈರವ ಹವನ್ ನಡೆಯಲಿದೆ ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 7-00ಗಂಟೆಗೆ ಅಷ್ಟಭೈರವ ಬಲಿ ಸೇವೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮಂಡಳ ಪ್ರಕಟಣೆಗೆ ತಿಳಿಸಿದೆ.