Wednesday, July 24, 2024
Homeನಿಧನಬೆಳ್ತಂಗಡಿ: ಮಾಜಿ ಶಾಸಕ ಕೆ. ವಸಂತ ಬಂಗೇರ ಪಾರ್ಥೀವ ಶರೀರ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಬೆಳ್ತಂಗಡಿ: ಮಾಜಿ ಶಾಸಕ ಕೆ. ವಸಂತ ಬಂಗೇರ ಪಾರ್ಥೀವ ಶರೀರ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಬೆಳ್ತಂಗಡಿ: ಐದು ಬಾರಿ ಶಾಸಕರಾಗಿದ್ದ ಕೆ. ವಸಂತ ಬಂಗೇರ ಅವರ ಪಾರ್ಥೀವ ಶರೀರ ಬೆಂಗಳೂರಿನಿಂದ ಇಂದು ಬೆಳಗ್ಗೆ 3:30 ಕ್ಕೆ ಬೆಳ್ತಂಗಡಿಯ ಹಳೆಕೋಟೆಯಲ್ಲಿರುವ ಅವರ ಮನೆಗೆ ಬಂದಿದೆ. ಬಳಿಕ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಇಂದು ಬೆಳಿಗ್ಗೆ ಅವರ ಮನೆಯಲ್ಲಿ ನಡೆಯಿತು. ಬಳಿಕ ಅವರ ಪಾರ್ಥೀವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಿನ್ನೆ ಸಂಜೆ 4 ಗಂಟೆಗೆ ಬೆಂಬಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆ. ವಸಂತ ಬಂಗೇರರು ಕೊನೆಯುಸಿರೆಳೆದಿದ್ದರು. ಪಾರ್ಥೀವ ಶರೀರ ಹಳೆಕೋಟೆಯ ನಿವಾಸಕ್ಕೆ ಬರುತ್ತಿದ್ದಂತೆ ಮನೆ ಎಲ್ಲಾ ಶೋಕ ಸಾಗರದಲ್ಲಿ ಮುಳುಗಿತು. ಕುಟುಂಬ ವರ್ಗಕ್ಕೆ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪಾರ್ಥೀವ ಶರೀರದ ಅಂತಿಮ ವಿದಿವಿಧಾನ ನೆರವೇರಿಸಿದ ಬಳಿಕ ಅವರ ಆಪ್ತ ವರ್ಗದವರು ಅಂತಿಮ ನಮನ ಸಲ್ಲಿಸಿದರು.

ಬಳಿಕ ಮೆರವಣಿಗೆಯ ಮೂಲಕ ಬೆಳ್ತಂಗಡಿ ತಾಲೂಕು ಕ್ರೀಡಾಂಗಣಕ್ಕೆ ಪಾರ್ಥೀವ ಶರೀರ ಕೊಂಡೊಯ್ಯಲಾಯಿತು. ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಮಧ್ಯಾಹ್ನದ ವರೆಗೆ ಅವಕಾಶ ನೀಡಲಾಗಿದೆ. ನಗರದಲ್ಲಿ ವರ್ತಕರು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಮಾಜಿ ಶಾಸಕರಿಗೆ ಗೌರವ ಸಲ್ಲಿಸಿದರು. ಸಂಜೆ ವೇಳೆ ಅವರ ಹುಟ್ಟೂರು ಕುವೆಟ್ಟು ಗ್ರಾಮದ ಕೇದೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

ಸಂಜೆ ವೇಳೆ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಕೇದೆ ಹೊಸಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು, ಅವರ ಆಪ್ತ ವಲಯ ಭಾಗವಹಿಸುವ ಸಾಧ್ಯತೆಯಿದೆ.

RELATED ARTICLES
- Advertisment -
Google search engine

Most Popular