Sunday, January 19, 2025
Homeರಾಜ್ಯಗುಜರಾತ್ ನಲ್ಲಿ ಸಿಕ್ಕಿದ್ದ ಐವತ್ತು ಅಡಿ ಉದ್ದದ ದೈತ್ಯ ಹಾವಿಗೆ "ವಾಸುಕಿ" ನಾಮಕರಣ

ಗುಜರಾತ್ ನಲ್ಲಿ ಸಿಕ್ಕಿದ್ದ ಐವತ್ತು ಅಡಿ ಉದ್ದದ ದೈತ್ಯ ಹಾವಿಗೆ “ವಾಸುಕಿ” ನಾಮಕರಣ

ನವದೆಹಲಿ: ಸಾವಿರಾರು ವರ್ಷಗಳಷ್ಟು ಹಳೆಯದಾದ ಬೃಹತ್ ಹಾವಿನ ಪಳೆಯುಳಿಕೆ ಗುಜರಾತ್ ನಲ್ಲಿ ಪತ್ತೆಯಾಗಿದೆ. ಗುಜರಾತ್ ನ ಕಛ್ ನಲ್ಲಿ ಬೃಹತ್ ಮೊಸಳೆಯದ್ದು ಎಂದೇ ನಂಬಲಾಗಿದ್ದ ಪಳೆಯುಳಿಕೆಯೊಂದರ ಅಸಲಿಯತ್ತು ಬಯಲಾಗಿದೆ. ಈ ದೈತ್ಯ ಪಳೆಯುಳಿಕೆ ಮೊಸಳೆಯದ್ದಲ್ಲ,ಇದು ಅತೀದೊಡ್ಡ ಹಾವಿನದದ್ದು ಎಂದು ಐಐಟಿ ರೂರ್ಕಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಸುಮಾರು 15 ಮೀಟರ್ ಉದ್ದದ ಈ ಹಾವು ಅನಕೊಂಡ ಮಾದರಿಯದ್ದು ಎಂದು ಅಂದಾಜಿಸಲಾಗಿದೆ. ಒಂದು ಕಾಲದಲ್ಲಿ ಕೊಲಂಬಿಯಾದಲ್ಲಿತ್ತೆನ್ನಲಾದ ಟೈಟಾನೋಬೋ ಹಾವಿಗಿಂತಲೂ ಉದ್ದನೆಯ ದೈತ್ಯ ಸರ್ಪ ಇದೆಂದು ಸಂಶೋಧಕರು ಹೇಳಿದ್ದಾರೆ. ಟೈಟಾನೋಬೋ 43 ಅಡಿ ಉದ್ದವಿದ್ದರೆ, ಇದು ಐವತ್ತು ಅಡಿಯಷ್ಟು ಉದ್ದದ್ದು ಎಂದು ಅಂದಾಜಿಸಲಾಗಿದೆ. ಕಛ್ ನ ಕಲ್ಲಿದ್ದಲು ಗಣಿಯಲ್ಲಿ ಪತ್ತೆಯಾಗಿರುವ ಈ ಹಾವಿನ ಅವಶೇಷವನ್ನು ಅಧ್ಯಯನ ಮಾಡಿ, ಈ ಪ್ರಭೇದಕ್ಕೆ ವಾಸುಕಿ ಇಂಡಿಕಸ್’ ಎಂದು ನಾಮಕರಣ ಮಾಡಲಾಗಿದೆ. ಭಾರತದಲ್ಲಿ ಈ ಹಾವಿನ ಅವಶೇಷ ಕಂಡುಬಂದುದರಿಂದ ಇಲ್ಲಿನ ಪುರಾಣದಲ್ಲಿ ಕಂಡು ಬರುವ `ವಾಸುಕಿ’ ಸರ್ಪದ ಹೆಸರನ್ನು ಇದಕ್ಕೆ ಇಡಲಾಗಿದೆ.

RELATED ARTICLES
- Advertisment -
Google search engine

Most Popular