Wednesday, October 9, 2024
Homeಉಡುಪಿಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಖ್ಯಾತ ಭಾಗವತ ವೇಣುಗೋಪಾಲ ಕೆಳಮನೆ ನಿಧನ

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಖ್ಯಾತ ಭಾಗವತ ವೇಣುಗೋಪಾಲ ಕೆಳಮನೆ ನಿಧನ

ಸಾಗರ: ತಾಲೂಕಿನ ಸಿಗಂದೂರು ಚೌಡಮ್ಮದೇವಿ ಕೃಪಾಪೋಷಿತ ಯಕ್ಷಗಾನ ಮೇಳದ ಭಾಗವತ ಕೆ.ಜಿ. ವೇಣುಗೋಪಾಲ ಕೆಳಮನೆ (44) ಇಂದು ನಿಧನರಾಗಿದ್ದಾರೆ. ಅಪಘಾತದಿಂದ ಗಾಯಗೊಂಡಿದ್ದ ಅವರು ಇಂದು ಚಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
ಕಲಾವಿದರ ಕುಟುಂಬದ ಹಿನ್ನೆಲೆಯಿದ್ದ ವೇಣುಗೋಪಾಲ ಅವರು ಉಡುಪಿಯ ಕಲಾ ಕೇಂದ್ರದಲ್ಲಿ ಭಾಗವತಿಕೆ ಸೇರಿದಂತೆ ಯಕ್ಷಗಾನದ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದರು. ಈ ಹಿಂದೆ ಸಾಲಿಗ್ರಾಮ ಮೇಳದಲ್ಲೂ ಅವರು ಕೆಲಸ ಮಾಡಿದ್ದರು.
ಸಿಗಂದೂರು ಮೇಳದಲ್ಲಿ ಭಾಗವತರ ತಂಡದಲ್ಲಿ ಕೆಲಸ ಮಾಡಿದ್ದ ಅವರು ಮುಂಬರುವ ಋತುವಿನಿಂದ ಮೇಳದ ಮುಖ್ಯ ಭಾಗವತರಾಗಿ ಕಾರ್ಯ ನಿರ್ವಹಿಸಲಿದ್ದರು ಎನ್ನಲಾಗಿದೆ.
ರಂಗ ಪ್ರದರ್ಶನ ಹಾಗೂ ಭಾಗವತಿಕೆಯಲ್ಲಿ ಅವರು ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಸೋಮವಾರ ಬೈಕಿನಲ್ಲಿ ತೆರಳುವಾಗ ಅಪಘಾತವಾಗಿತ್ತು. ತಲೆಗೆ ತೀವ್ರ ಏಟಾಗಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

RELATED ARTICLES
- Advertisment -
Google search engine

Most Popular