ಬೆಳ್ತಂಗಡಿ: ವೇಣೂರಿನ ಪಚ್ಚೇರಿ ಪರಿಸರದಲ್ಲಿ ಚಿರತೆಯೊಂದು ಮನೆಯೊಂದರ ಸಾಕು ನಾಯಿಯನ್ನು ಕೊಂಡೊಯ್ದಿದೆ. ಪರಿಸರದಲ್ಲಿ ಚಿರತೆ ಚಲವಲನ ಕಂಡು ಸ್ಥಳೀಯರು ಆತಂಕಿತರಾಗಿದ್ದಾರೆಎ..
ಪಚ್ಚೇರಿ ಗೋಳಿದಡ್ಕ ಎಂಬಲ್ಲಿನ ಕೃಷ್ಣಾನಂದ ಭಟ್ ಅವರ ಸಾಕು ನಾಯಿಯನ್ನು ಚಿರತೆ ಕೊಂಡೊಯ್ದಿದೆ. ಚಿರತೆ ತನ್ನ ಬಾಯಿಯಲ್ಲಿ ಸಾಕು ನಾಯಿಯನ್ನು ಕಚ್ಚಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆಯಿಂದ ರಕ್ಷಣೆ ಕೋರಿ ವೇಣೂರು ವಲಯ ಅರಣ್ಯಾಧಿಕಾರಿಗಳಿಗೆ ಕೃಷ್ಣಾನಂದ ಮನವಿ ಮಾಡಿದ್ದಾರೆ.