Sunday, July 14, 2024
Homeಧಾರ್ಮಿಕವೇಣೂರು: ಭಗವಾನ್ ಬಾಹುಬಲಿಸ್ವಾಮಿಗೆ ಮಹಾಮಸ್ತಕಾಭಿಷೇಕ  

ವೇಣೂರು: ಭಗವಾನ್ ಬಾಹುಬಲಿಸ್ವಾಮಿಗೆ ಮಹಾಮಸ್ತಕಾಭಿಷೇಕ  

ಉಜಿರೆ: ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಆಶ್ರಯದಲ್ಲಿ ವೇಣೂರಿನಲ್ಲಿ 16-3-2024 ಶನಿವಾರ ಸಂಜೆ 6ಗಂಟೆಯಿಂದ ಭಗವಾನ್ ಬಾಹುಬಲಿಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ ತಿಳಿಸಿದ್ದಾರೆ.

ಅಭಿನಂದನಾ ಸಮಾರಂಭ: ಅಪರಾಹ್ನ ಗಂಟೆ 2:30 ರಿಂದ ಮಸ್ತಕಾಭಿಷೇಕದ ಯಶಸ್ಸಿಗೆ ಸಹಕರಿಸಿದ ಕಾರ್ಯಕರ್ತರ ಅಭಿನಂದನಾ ಸಮರಂಭವನ್ನು ಭರತೇಶ ಸಮುದಾಯಭವನದಲ್ಲಿ ಆಯೋಜಿಸಲಾಗಿದೆ.
ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕ ಸ್ವಾಮೀಜಿಯವರ ದಿವ್ಯಉಪಸ್ಥಿತಿ  ಮತ್ತು ಮಂಗಲಪ್ರವಚನದೊಂದಿಗೆ ಸಮಾರಂಭ ನಡೆಯಲಿದೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ  ಅಧ್ಯಕ್ಷತೆ ವಹಿಸುವರು. ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಸಂಚಾಲಕ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶುಭಾಶಂಸನೆ ಮಾಡುವರು.

RELATED ARTICLES
- Advertisment -
Google search engine

Most Popular