ನವದೆಹಲಿ: ಭಾರತೀಯ ರೈಲ್ವೇ ವಿತರಣೆ ಮಾಡಿದ್ದ ಆಹಾರದಲ್ಲಿ ‘ಜರಿ ಹುಳು’ ಪತ್ತೆಯಾಗಿದ್ದು, ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ದೆಹಲಿ ಮೂಲದ ಆರೇನ್ಶ್ ಸಿಂಗ್ ಎಂಬುವವರು ‘ದೆಹಲಿಯ ವಿಐಪಿ ಎಕ್ಸಿಕ್ಯುಟಿವ್ ಲಾಂಜ್‌ನಲ್ಲಿ ನಾನು ತೆಗೆದುಕೊಂಡಿದ್ದ ಆಹಾರದಲ್ಲಿ ‘ಜರಿ ಹುಳು’ ಪತ್ತೆಯಾಗಿದೆ. ಅಲ್ಲದೆ ಭಾರತೀಯ ರೈಲ್ವೇ ಆಹಾರದ ಗುಣಮಟ್ಟ ಸುಧಾರಿಸಿದ್ದು, ಈಗ ಅವರು ಹೆಚ್ಚು ಪ್ರೋಟೀನ್‌ನೊಂದಿಗೆ ರಾಯ್ತಾವನ್ನು ನೀಡುತ್ತಿದ್ದಾರೆ’ ಎಂಬ ಅಡಿಬರಹದೊಂದಿಗೆ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಅಲ್ಲದೆ ಆರೇನ್ಶ್ ಸಿಂಗ್ ವಿಐಪಿ ಎಕ್ಸಿಕ್ಯುಟಿವ್ ಲಾಂಜ್ ನಲ್ಲೇ ಇಂತಹುದು ಸಂಭವಿಸಿದರೆ ಇನ್ನು ನೀವು ಸಾಮಾನ್ಯ ರೈಲುಗಳಲ್ಲಿ ನೀಡುವ ಆಹಾರದ ಗುಣಮಟ್ಟದ ಕುರಿತು ಕಲ್ಪನೆ ಮಾಡಿಕೊಳ್ಳಬಹುದು. ರೈಲ್ವೇ ಆಹಾರ ಸುರಕ್ಷತೆಯ ಬಗ್ಗೆ ಕಳವಳಕಾರಿ ಕೊರತೆ ಇದೆ ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ಜನರು ಹುಚ್ಚರಾಗಿದ್ದಾರೆ. ಐಆರ್‌ಸಿಟಿಸಿ ಲಾಂಜ್‌ನಲ್ಲಿ ವಿತರಿಸಿದ ಆಹಾರದಲ್ಲಿ ನಾನು ಜೀವಂತ ಜರಿ ಹುಳು’ ಪತ್ತೆಯಾಗಿದೆ. ನಾನು ಎದ್ದುನಿಂತು ಎಲ್ಲರಿಗೂ ಅವರವರ ಆಹಾರವನ್ನು ಪರೀಕ್ಷಿಸಲು ಹೇಳಿದೆ. ಬಳಿಕ ಎಲ್ಲರೂ ನಾನು ತೆಗೆದುಕೊಂಡಿದ್ದ ಆಹಾರದಲ್ಲಿ ಪತ್ತೆಯಾದ ಹುಳವನ್ನು ನೋಡಿ ಆಡಳಿತದ ಮೇಲೆ ಕೋಪಗೊಂಡರು. ನಂತರ ಅವರೆಲ್ಲ ಅದೇ ಆಹಾರವನ್ನು ತಿನ್ನಲು ಹೋದರು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಆರೇನ್ಶ್ ಸಿಂಗ್ ಅವರ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಆರ್‌ಸಿಟಿಸಿ, ‘ಸರ್ ನಿಮಗಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ತಕ್ಷಣದ ಕ್ರಮಕ್ಕಾಗಿ ರಶೀದಿ/ಬುಕಿಂಗ್ ವಿವರಗಳು, ನಿಲ್ದಾಣದ ಹೆಸರು ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ದಯವಿಟ್ಟು ಹಂಚಿಕೊಳ್ಳಿ ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದೆ.