spot_img
25.6 C
Udupi
Monday, December 4, 2023
spot_img
spot_img
spot_img

ಹಿರಿಯ ನಟ ಧರ್ಮೇಂದ್ರರಿಗೆ ಅನಾರೋಗ್ಯ : ಚಿಕಿತ್ಸೆ ಪಡೆಯಲು ಅಮೆರಿಕಾ ಪಯಣ

ಮುಂಬಯಿ: ಬಾಲಿವುಡ್‌ ನ ಹಿರಿಯ ನಟ ಧರ್ಮೇಂದ್ರ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಚಿಕಿತ್ಸೆಗಾಗಿ ಯುಎಸ್‌ ಗೆ ಕರೆದುಕೊಂಡು ಹೋಗಲಾಗಿದೆ ಎಂದು ವರದಿಯಾಗಿದೆ.

87 ವರ್ಷದ ಧರ್ಮೇಂದ್ರ ಅವರು ವಯೋಸಹಜ ಕಾಯಿಲೆಯಿಂದ ಬಳಲಯತ್ತಿದ್ದು, ಅವರ ಆರೋಗ್ಯದಲ್ಲಿ ಸಮಸ್ಯ ಕಾಣಿಸಿಕೊಂಡಿದೆ.

ಈ ಹಿನ್ನೆಲೆ ಚಿಕಿತ್ಸೆ ನೀಡಲು ಅಮೆರಿಕಾಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ವರದಿ ತಿಳಿಸಿದೆ.ಅವರ ಮಗ ಸನ್ನಿ ಡಿಯೋಲ್‌ ಅವರು ʼಗದರ್-2‌ʼ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದು, ತಂದೆಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಿಂದ ಬ್ರೇಕ್‌ ಪಡೆದುಕೊಂಡು ತಂದೆಯನ್ನು ಸ್ವತಃ ಸನ್ನಿ ಡಿಯೋಲ್‌ ಅವರೇ ಯುಎಸ್‌ ಗೆ ಕರೆದುಕೊಂಡು ಹೋಗಿದ್ದಾರೆ. ಅಮರಿಕಾದಲ್ಲಿ ವಿಶೇಷ ಚಿಕಿತ್ಸೆ ನೀಡಲಿದ್ದಾರೆ ಎನ್ನಲಾಗಿದೆ.“ಧರಮ್ ಸರ್ ಅವರಿಗೆ ಆರೋಗ್ಯ ಸಮಸ್ಯೆಗಳಿವೆ. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ, ಸನ್ನಿ ತನ್ನ ತಂದೆಯನ್ನು ಯುಎಸ್‌ಎಗೆ ಕರೆದುಕೊಂಡು ಹೋಗಿದ್ದಾರೆ. ಅವರು ಅಮೆರಿಕಾದಲ್ಲಿ 15-20 ದಿನಗಳವರೆಗೆ ಅಥವಾ ಚಿಕಿತ್ಸೆಯು ಹೋಗುವವರೆಗೆ ಇರುತ್ತಾರೆ. ಚಿಂತಿಸುವ ಅಗತ್ಯವಿಲ್ಲ” ಎಂದು ಮೂಲಗಳು ಹೇಳಿರುವುದಾಗಿ ʼಇಂಡಿಯಾ ಟುಡೇʼ ವರದಿ ತಿಳಿಸಿದೆ.ಇತ್ತೀಚೆಗೆ ಧರ್ಮೇಂದ್ರ ಅವರು ʼ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಅವರು ಕೆಲ ಸಿನಿಮಾದಲ್ಲಿ ಕಾಣಿಸಿಕೊಳ್ಳುವವರಿದ್ದಾರೆ.

Related Articles

Stay Connected

0FansLike
3,912FollowersFollow
0SubscribersSubscribe
- Advertisement -

Latest Articles