26.6 C
Udupi
Tuesday, November 29, 2022
spot_img

ಸುಳ್ಯದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮೋನಪ್ಪ ಗೌಡ ಇನ್ನಿಲ್ಲ

ಸುಳ್ಯ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸುಳ್ಯ ತಾಲೂಕು ಕನಕಮಜಲು ಗ್ರಾಮದ ಶತಾಯುಷಿ ಮೋನಪ್ಪ ಗೌಡ ಕೊರಂಬಡ್ಕ (102) ಅವರು ಬುಧವಾರದಂದು ತಮ್ಮ ನಿವಾಸದಲ್ಲೇ ಅನಾರೋಗ್ಯದಿಂದ ಧೈವಾದೀನರಾಗಿದ್ದಾರೆ.

ಮೋನಪ್ಪ ಗೌಡರು ಅಂದಿನ ಮುಖ್ಯಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯ, ಕಡಲತಡಿಯ ಭಾರ್ಗವ ಶಿವರಾಮ ಕಾರಂತರು, ಶ್ರೀನಿವಾಸ್ ಮಲ್ಯ ರವರಿಗೆ ಚಾಲಕರಾಗಿ ಸೇವೆ ಸಲ್ಲಿಸಿದವರು.ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆಗಿನ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರುರೊಂದಿಗೆ ಗುರುತಿಸಿಕೊಂಡ ಮೋನಪ್ಪ ಗೌಡರು ನೆಹರೂರವರಿಗೂ ಚಾಲಕರಾಗಿ ಸೇವೆ ಗೈದಿದ್ದಾರೆ.

ಕನಕಮಜಲಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರಾಗಿದ್ದ ಮೋನಪ್ಪ ಗೌಡರನ್ನು ಮಕ್ಕಳಾದ ವೆಂಕಟ್ರಮಣ ಕೊರಂಬಡ್ಕ , ಕಮಲ, ವಿಮಲ, ಕುಸುಮರವರು ಸೇರಿದಂತೆ ಊರಿನವರು ಕೂಡ ಅವರನ್ನಗಳಿದ್ದಾರೆ.

Related Articles

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles