ಚಿತ್ತಗಾಂಗಿನ ಕ್ರಾಂತಿವೀರರು( ಅನುವಾದ)1949, ಮತ್ತೆ ಬೆಳಗಿತು ಸೊಡರು ( ಕಥಾ ಸಂಕಲನ ) 2005, ಇಂಟರ್ನೆಟ್ಟಿನ ಒಳಗೆ ಮತ್ತು ಇತರ ಕಥೆಗಳು ( ಕಥಾ ಸಂಕಲನ )2007, ಸೌಪರ್ಣಿಕ ಕಡತ್ ದ್ ವೈತರಣಿಗ್ ( ತುಳು ಕಥಾ ಸಂಕಲನ )2007, ದೇಸಾoತರ(ತುಳು ಕಾದಂಬರಿ)2009, ಬೋಂಟೆ ದೇರ್o ಡ್ (ತುಳು ಕಾದಂಬರಿ )2011, ಗ್ರಹಣ ಕಳೆಯಿತು (ಕಥಾ ಸಂಕಲನ )2013, ಇವೆಲ್ಲದರ ಬರಹಗಾರ್ತಿ ಹಾಗೂ ಕಾದಂಬರಿ ಕರ್ತೃ ಇವರು ಪುತ್ತೂರಿಗೆ ಸೊಸೆಯಾಗಿ ಬಂದವರು. ಪ್ರಸ್ತುತ ಮಂಗಳೂರಿನ ಮಡಿಲಲ್ಲಿ ವಾಸಿಸುತ್ತಿರುವ ಲಲಿತಾ ಆರ್ ರೈ ಅವರ ಸಾಧನೆಯ ಮೆಟ್ಟಿಲು ತುಂಬಾ ಜಟಿಲವೇ ಆಗಿತ್ತು. ಅವರ ತೊಂಬತ್ತಾರರ ಇಳಿ ಹರೆಯದ ಹೊತ್ತಲ್ಲಿ ಅವರನ್ನು ಸಾಹಿತ್ಯ ಪ್ರಿಯೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್( SCI) ಪುತ್ತೂರು ಲೀಜನ್ ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ಯವರು ತಮ್ಮ SCI ಪುತ್ತೂರು ತಂಡದೊಂದಿಗೆ ಶಾಲು, ಹಣ್ಣು ಹಂಪಲು ಹಾಗೂ ಪುಸ್ತಕವನ್ನು ನೀಡಿ ಲಲಿತಾ ಆರ್ ರೈ ಅವರನ್ನು ಸ್ವಗೃಹದಲ್ಲಿ ಸತ್ಕರಿಸಿದರು. ಸಂದರ್ಭದಲ್ಲಿ ಲಲಿತಾ ಆರ್ ರೈ ಯವರ ಕಿರಿಯ ಪುತ್ರಿ ಕೃಪಾ ಅವರು ಉಪಸ್ಥಿತರಿದ್ದರು.