ಮಂಗಳೂರು: ತುಳುವಿನ ಹಿರಿಯ ಕತೆಗಾರ ಮುದ್ದು ಮೂಡುಬೆಳ್ಳೆ ಅವರ 90ರ ದಶಕದ “ಒಸಯೊ ತುಳು ಕತೆಕ್ಕು’ ಸಂಕಲನದ ಕತೆಗಳನ್ನು ಅನುವಾದಕ ಕತೆಗಳು ಈಗಾಗಲೇ ಮಲಯಾಳದ ಚಂದ್ರಿಕಾ ಮತ್ತು ಓಣಂ ವಿಶೇಷಾಂಕಗಳಲ್ಲಿ ಪ್ರಕಟಗೊಂಡಿದ್ದು, ಒಸಯೊ ಸಂಕಲನವೂ ಇದೇ ಅನುವಾದಕರಿಂದ ಅನುವಾದವಾಗಿದೆ. ಈ ಮೊದಲು 2016ರಲ್ಲಿ ಗೋವಾದ ಪ್ರೊ.ಎಸ್.ಎ.ಎನ್.ಡಿ.ಪೂಜಾರಿ ಮತ್ತು ಪ್ರೊ. ಸುರೇಂದ್ರ ರಾವ್ -ಚಿನ್ನಪ್ಪ ಗೌಡ ಜೋಡಿ ಈ ಕತೆಗಳ ಆಂಗ್ಲಾನುವಾದ ಪ್ರಕಟಿಸಿದ್ದಾರೆ. ಮೂಡುಬೆಳ್ಳೆಯವರ ಕತೆಗಳು ಗುಲ್ಬರ್ಗ ವಿವಿ ಪದವಿಗೆ ಹಾಗೂ ಮಂಗಳೂರು ವಿವಿ ಎಂ.ಎ. ತರಗತಿಗಳಿಗೆ ಪಠ್ಯವಾಗಿವೆ. ಕವಿತೆಗಳು ಕನ್ನಡ, ಹಿಂದಿ, ಕೊಂಕಣಿ, ಮರಾಠಿ, ತೆಲುಗು, ಬಂಗಾಳಿ ಭಾಷೆಗಳಿಗೆ ಭಾಷಾಂತರಗೊಂಡಿವೆ.