Saturday, April 26, 2025
Homeಬೆಂಗಳೂರುವಿಕ್ಟೋರಿಯಾ ಆಸ್ಪತ್ರೆ ವೈದ್ಯೆಯಿಂದ ಅತ್ತೆ-ಮಾವನ ಮೇಲೆ ಹಲ್ಲೆ

ವಿಕ್ಟೋರಿಯಾ ಆಸ್ಪತ್ರೆ ವೈದ್ಯೆಯಿಂದ ಅತ್ತೆ-ಮಾವನ ಮೇಲೆ ಹಲ್ಲೆ

ಬೆಂಗಳೂರು : ವಯಸ್ಸಾದ ಅತ್ತೆ, ಮಾವನ ಮೇಲೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಪ್ರಿಯದರ್ಶಿನಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯೆ ಪ್ರಿಯದರ್ಶಿನಿ ಅತ್ತೆ-ಮಾವನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್​ ಆಗಿದೆ.

ಇಎಸ್ಐ ಆಸ್ಪತ್ರೆಯ ದಂತ ವೈದ್ಯ ನವೀನ್ ಕುಮಾರ್ ಮತ್ತು ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಪ್ರಿಯದರ್ಶಿನಿ 2007ರಲ್ಲಿ ವಿವಾಹವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ನವೀನ್ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. 2017ರಿಂದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣ ನಡೆಯುತ್ತಿದೆ. ಅತ್ತೆ-ಮಾವನಿಗೆ ಪ್ರಿಯದರ್ಶಿನಿ ಕಳೆದ 10 ವರ್ಷದಿಂದ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಕಿರುಕುಳ ಕೊಡುತ್ತಿದ್ದ ಹಿನ್ನೆಲೆಯಲ್ಲಿ ನವೀನ್​ ಕುಮಾರ್​ ಪತ್ನಿ ಪ್ರಿಯದರ್ಶಿನಿಯನ್ನು ತೊರೆದು ತಂದೆ-ತಾಯಿ ಜೊತೆ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಇನ್ನು, ಪ್ರಿಯದರ್ಶಿನಿ ಮಕ್ಕಳ ಜೊತೆ ವಾಸವಾಗಿದ್ದಾರೆ.

ವಿಚ್ಛೇದನ ಪ್ರಕರಣ ಹಿನ್ನೆಲೆಯಲ್ಲಿ ಅತ್ತೆ-ಮಾವರನ್ನು ನ್ಯಾಯಾಲಯ ಭೇಟಿಯಾಗುವಂತಿಲ್ಲ ಎಂದು ಸೂಚನೆ ನೀಡಿದೆ. ಆದರೂ ಕೂಡ ಮಾರ್ಚ್​ 10ರಂದು ರಾತ್ರಿ 8:30 ಸುಮಾರಿಗೆ ವೈದ್ಯೆ ಪ್ರಿಯದರ್ಶಿನಿ ವೃದ್ಧ ದಂಪತಿ ವಾಸವಾಗಿರುವ ಅನ್ನಪೂರ್ಣೇಶ್ವರಿ ನಗರದ ನರಸಿಂಹಯ್ಯ ನಿವಾಸಕ್ಕೆ ಆಗಮಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಿಯದರ್ಶಿನಿಗೆ ನೋಟಿಸ್‌ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular