Monday, July 15, 2024
Homeಉಡುಪಿವಿದ್ಯಾಪೋಷಕ್ ಮನೆ ಹಸ್ತಾಂತರ

ವಿದ್ಯಾಪೋಷಕ್ ಮನೆ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‍ನ, ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ, ಕುಂದಾಪುರ ತಾಲೂಕಿನ, ಹೆಮ್ಮಾಡಿಯ ಕಟ್ಟುವಿನಲ್ಲಿ, ಸಿಂಚನಾಳಿಗೆ, ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆಯವರ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿದ ನೂತನ ಮನೆ ‘ಸರಸ್ವತೀ ನಿಲಯ’ 30.05.2024 ರಂದು ಉದ್ಘಾಟನೆಗೊಂಡಿತು. ಕೃಷ್ಣಪ್ರಸಾದ್ ಅಡ್ಯಂತಾಯರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶಾಸಕ ಗುರುರಾಜ ಗಂಟಿಹೊಳೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಪರ ಕೆಲಸಗಳು ಅಗಾಧವಾದುದು. ಅವರು ವಿದ್ಯಾಪೋಷಕ್ ಗೆ ಹಾಗೂ ಮನೆ ನಿರ್ಮಾಣಕ್ಕೆ ಆಯ್ಕೆ ಮಾಡುವ ವಿಧಾನವೇ ಅತ್ಯಂತ ವೈಜ್ಞಾನಿಕ. ಕನಿಷ್ಟ ವೆಚ್ಚದಲ್ಲಿ ವಾಸಯೋಗ್ಯ ಮನೆ ಕಟ್ಟಿಕೊಡುವ ಯೋಜನೆ ಬೇರೆಡೆ ಕಾಣಸಿಗದು. ದಾನಿಗಳು ನೀಡುವ ಹಣ ಪೋಲಾಗದಂತೆ ಅವರು ವಹಿಸುವ ಕಾಳಜಿಗೆ ಶರಣು ಎಂದು ಹೇಳಿದರು. ಪ್ರಾಯೋಜಕತ್ವದಲ್ಲಿ ಸಹಕರಿಸಿದ ಉದ್ಯಮಿಗಳಾದ ಬಿ. ಎಸ್. ಸುರೇಶ್ ಶೆಟ್ಟಿ, ವೆಂಕಟೇಶ್ ಕಿಣಿ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ಸಂಸ್ಥೆಯ ದಾನಿಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಪಂಚಾಯತ್ ಅಧ್ಯಕ್ಷೆ ನೇತ್ರಾವತಿ, ಸಾಮಾಜಿಕ ಕಾರ್ಯಕರ್ತ ರಾಜೇಶ್, ಗೋಪಾಲ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ.ಕೆ. ಸದಾಶಿವ ರಾವ್ ವೇದಿಕೆಯಲ್ಲಿದ್ದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ಹೆಮ್ಮಾಡಿ ಶಾಲಾ ಮುಖ್ಯೋಪಾಧ್ಯಾಯ ಮಂಜು ಕಾಳಾವಾರ್, ಪತ್ರಕರ್ತ ಶ್ರೀಪತಿ ಹೆಗಡೆ, ನರಸಿಂಹಮೂರ್ತಿ ಸಂಸ್ಥೆಯ ಸದಸ್ಯರುಗಳಾದ ಬಿ. ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯ, ಸಂತೋಷ ಕುಮಾರ ಶೆಟ್ಟಿ, ಎ.ಅಜಿತ್ ಕುಮಾರ್, ಸುದರ್ಶನ ಬಾಯರಿ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿದ 53ನೇಯ ಮನೆಯಾಗಿದೆ.

RELATED ARTICLES
- Advertisment -
Google search engine

Most Popular