ವಿಯೆಟ್ನಾಂ: ಇಲ್ಲಿನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಬಿಲಿಯನೇರ್ ಟ್ರೂಂಗ್ ಮೈ ಲ್ಯಾನ್ ಗೆ ಶತ ಕೋಟಿ ವಂಚನೆ ಪ್ರಕರಣದಲ್ಲಿ ಮರಣ ದಂಡನೆ ವಿಧಿಸಲಾಗಿದೆ. ಇಡೀ ವಿಯೆಟ್ನಾಂ ದೇಶದಲ್ಲಿ ಅತಿದೊಡ್ಡ ಹಣಕಾಸು ವಂಚನೆ ಎಂದು ಹೇಳಲಾಗಿರುವ ಈ ಪ್ರಕರಣದಲ್ಲಿ ಟ್ರೂಂಗ್ ಮೈ ಲ್ಯಾನ್ ಗೆ ಶಿಕ್ಷೆ ವಿಧಿಸಲಾಗಿದೆ. ಸೈಗಾನ್ ಜಾಯಿಂಟ್ ಸ್ಟಾಕ್ ಕಮರ್ಷಿಯಲ್ ಬ್ಯಾಂಕ್ ನಲ್ಲಿ ವಂಚನೆ ಎಸಗಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮರಣ ದಂಡನೆ ವಿಧಿಸಲಾಗಿದೆ. ಸುಮಾರು 12.5 ಶತಕೋಟಿ ಡಾಲರ್ ಅಂದರೆ 1.04 ಲಕ್ಷ ಕೋಟಿ ರೂ ವಂಚನೆಯ ಆರೋಪ ಈಕೆಯ ಮೇಲಿತ್ತು. ಹೋ ಚಿ ಮಿನ್ಹ್ ನಗರದ ಕೋರ್ಟ್ ಆಕೆಗೆ ಮರಣ ದಂಡನೆ ವಿಧಿಸಿದೆ. ಲ್ಯಾನ್ ಳ ಪತಿ ಎರಿಕ್ ಚುಗೆ ಒಂಬತ್ತು ವರ್ಷ ಜೈಲು ಮತ್ತು ಸೋದರ ಸೊಸೆಗೆ 17 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.