Tuesday, April 22, 2025
Homeಮೂಡುಬಿದಿರೆವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ.), ಮೂಡುಮಾರ್ನಾಡು ಇದರ ವತಿಯಿಂದ 9 ನೇ ವರ್ಷದ ಯುಗಾದಿ ಸಂಭ್ರಮ...

ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ.), ಮೂಡುಮಾರ್ನಾಡು ಇದರ ವತಿಯಿಂದ 9 ನೇ ವರ್ಷದ ಯುಗಾದಿ ಸಂಭ್ರಮ 2025

ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ.), ಮೂಡುಮಾರ್ನಾಡು ಇದರ ವತಿಯಿಂದ ವಿಘ್ನೇಶ್ವರ ಮಹಿಳಾ ಮಂಡಳಿ (ರಿ.), ಮೂಡುಮಾರ್ನಾಡು ಇವರ ಸಹಯೋಗದೊಂದಿಗೆ ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಊರವರ ಸಹಕಾರದೊಂದಿಗೆ 9ನೇ ವರ್ಷದ ಯುಗಾದಿ ಸಂಭ್ರಮ 2025 ನಡೆಯಲಿದೆ.

ಸಮಾಜಮುಖಿ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ವೈಭವ ಮಾರ್ಚ್‌ 30. 2025 ಆದಿತ್ಯವಾರ ಸಂಜೆ ಗಂಟೆ 6 ರಿಂದ 9ನೇ ವರ್ಷದ ಯುಗಾದಿ ಸಂಭ್ರಮ 2025 ವಿಘ್ನೇಶ್ವರ ಭಜನಾ ಮಂಡಳಿ ಬಳಿಯ ಪೆಂರ್ಕಾಡಿ ಮೈದಾನದಲ್ಲಿ ನಡೆಯಲಿದೆ. ಸಾಧಕರಿಗೆ ಸನ್ಮಾನ ,ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಸೈನಿಕರಿಗೆ ಸನ್ಮಾನ, ಸಮಾಜಮುಖಿ ಕಾರ್ಯಕ್ರಮ ನಡೆಯಲಿದೆ.

ಸಾಯಿ ಮಾರ್ನಾಡು ಸೇವಾಸಂಘ (ರಿ.) ಪಡುಮಾರ್ನಾಡು, ಪವರ್ ಫ್ರೆಂಡ್ಸ್ ಬೆದ್ರ, ಸರ್ವೋದಯ ಫ್ರೆಂಡ್ಸ್ ಬೆದ್ರ ಹಾಗೂ ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ.) ಮೂಡುಮಾರ್ನಾಡು ಇವರ ಜಂಟಿ ಆಶ್ರಯದಲ್ಲಿ ನೊಂದವರಿಗೆ ಸಹಾಯ ಹಸ್ತ ಸಾಂಸ್ಕೃತಿಕ ವೈಭವ ಊರಿನ ಹಾಗೂ ಮೂಡುಬಿದಿರೆ ಪರಿಸರದ ಆಯ್ದ ಕಲಾವಿದರಿಂದ “ನಾಟ್ಯ ಸೌಂದರ್ಯ”ಸಾಂಸ್ಕೃತಿಕ ವೈಭವ ನಡೆಯಲಿದೆ.

ವಿಶೇಷ ಪ್ರತಿಭೆಯಾದ ಜೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5ರ ಫೈನಲಿಸ್ಟ್ ಅಪೂರ್ವ ಮಾಳ ಮತ್ತು ವಿಶೇಷ ಆಕರ್ಷಣೆಯಾದ “ದಸ್ಕತ್” ತುಳುಚಿತ್ರ ನಿರ್ದೇಶಕರು ಮತ್ತು ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಇವರು ಆಗಮಿಸಲಿದ್ದಾರೆ.

ರಾತ್ರಿ ಗಂಟೆ 10.30ಕ್ಕೆ ಶಾರದಾ ಆರ್ಟ್ಸ್ ಕಲಾವಿದರು (ರಿ.), ಮಂಜೇಶ್ವರ ಅಭಿನಯದ ಕಥೆ ಎಡ್ಡೆಂಡು ನಾಟಕ ನಡೆಯಲಿದೆ.

RELATED ARTICLES
- Advertisment -
Google search engine

Most Popular