Thursday, April 24, 2025
Homeರಾಜ್ಯವಿಜಯ ಸಂಕಲ್ಪ ಸಮಾವೇಶ ಕಿರಿಮಂಜೇಶ್ವರ

ವಿಜಯ ಸಂಕಲ್ಪ ಸಮಾವೇಶ ಕಿರಿಮಂಜೇಶ್ವರ

ಬೈಂದೂರು:ರಾಷ್ಟ್ರಭಕ್ತ ಬಳಗ ಬೈಂದೂರು ವತಿಯಿಂದ ಬ್ರಹತ್ ವಿಜಯ ಸಂಕಲ್ಪ ಸಮಾವೇಶ ಕಿರಿಮಂಜೇಶ್ವರದಲ್ಲಿ ಬುಧವಾರ ನಡೆಯಿತು.ಬೃಹತ್ ಸಂಖ್ಯೆಯಲ್ಲಿ ಜನರು ಸಮಾವೇಶದಲ್ಲಿ ಭಾಗವಹಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿ,ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಕೆಲಸವನ್ನು ಮಾಡುತ್ತಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಪರಿಸ್ಥಿತಿ ಶೋಚನೀಯವಾಗಿದೆ.ಅವರಿಗೆ ಹಿಂದುತ್ವದ ಬಗ್ಗೆ ಕಾಳಜಿ ಮತ್ತು ಆಸಕ್ತಿ ಇಲ್ಲ.ಜನರ ಭಾವನೆಗಳಿಗೆ ಮತ್ತು ಹಿಂದುತ್ವಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

ಹಿಂದೂ ಮುಖಂಡ ಕೃಷ್ಣ ಬಿಜೂರು ಪ್ರಾಸ್ತಾವಿಕವಾಗಿ ಮಾತನಾಡಿ,ಹಿಂದೂ ಸಮಾಜದ ಧ್ವನಿಯಾಗಿ ಈಶ್ವರಪ್ಪ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ.ಸಚಿವರಾಗಿದ್ದ ಸಮಯದಲ್ಲಿ ಬೈಂದೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.ಅವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕಬ್ಬಿನ ಗುರುತಿಗೆ ಮತ ನೀಡಬೇಕೆಂದು ಕೇಳಿಕೊಂಡರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಾಜಿ ಮೇಯರ್ ಸೀತಾಲಕ್ಷ್ಮಿ ಮಾತನಾಡಿದರು.ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕರಾದ ನಾಗರಾಜ ಖಾರ್ವಿ,ಸುರೇಶ ಪೂಜಾರಿ,ಶೈಲಜಾ,ಕೋಮಲ,ಮಂಗಳ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆರತಿ,ಸುವರ್ಣ ಶಂಕರ್, ಮೋಹನ ಖಾರ್ವಿ ಉಪ್ಪುಂದ,ವಿನೋದರಾಜ್ ಖಾರ್ವಿ,ಜಗದೀಶ ಖಾರ್ವಿ ಉಪಸ್ಥಿತರಿದ್ದರು.ಉಮೇಶ ಬಿಜೂರು ಸ್ವಾಗತಿಸಿದರು.ಮಹೇಶ್ ಶೇಟ್ ವಂದಿಸಿದರು.ಮೀನುಗಾರರ ವತಿಯಿಂದ ಈಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular