ಬೆಂಗಳೂರು: ದರ್ಶನ್ ಅವರ ಪತ್ನಿ ಪವಿತ್ರ ಗೌಡ ಅಲ್ಲ, ತಾನೇ ಅವರ ಪತ್ನಿ ಎಂದು ವಿಜಯಲಕ್ಷ್ಮಿ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
2003ರ ಮೇ 19ರಂದು ತನಗೆ ಹಾಗೂ ದರ್ಶನ್‌ಗೆ ಮದುವೆ ಆಗಿದೆ. ತಮ್ಮಿಬ್ಬರಿಗೆ ಒಬ್ಬ ಮಗ ಇದ್ದಾನೆ. ಸಂಜಯ್ ಸಿಂಗ್ ಎಂಬವರನ್ನು ಪವಿತ್ರ ಗೌಡ ಮದುವೆ ಆಗಿದ್ದಾರೆ. ಅವರಿಬ್ಬರಿಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ ಎಂದು ವಿಜಯಲಕ್ಷ್ಮಿ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಾವು ದರ್ಶನ್ ಅವರ ಪತ್ನಿ ಪವಿತ್ರ ಗೌಡ ಅಂತ ಹೇಳಿದ್ದೀರಿ. ಗೃಹ ಸಚಿವರೂ ಒಮ್ಮೆ ಅದನ್ನೇ ಉಚ್ಚರಿಸಿದ್ದಾರೆ. ಹೀಗಾಗಿ ಪೊಲೀಸ್ ದಾಖಲೆಗಳಲ್ಲಿ ಪವಿತ್ರ ಗೌಡ ದರ್ಶನ್ ಅವರ ಪತ್ನಿ, ದರ್ಶನ್ ಅವರನ್ನು ಮದುವೆಯಾಗಿದ್ದಾರೆ ಎಂದು ಉಲ್ಲೇಖಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಪತ್ರ ಪೊಲೀಸ್ ಆಯುಕ್ತ ದಯಾನಂದ ಅವರ ಕಚೇರಿಗೆ ತಲುಪಿದೆ ಎನ್ನಲಾಗಿದೆ.