ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಶುದ್ಧ ತ್ರಯೋದಶಿ ವೈಕುಂಠ ಚತುರ್ದಶಿ ಎಂದು ಶ್ರೀ ದೇವರ ವನಭೋಜನ ಉತ್ಸವ ವಿಜ್ರಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕರಿಂದ ಪ್ರಾರ್ಥನೆ, ಶ್ರೀ ವೆಂಕಟರಮಣ ಹಾಗೂ ಶ್ರೀ ವಿಠ್ಠಲ ದೇವರಿಗೆ ಅಭಿಷೇಕ, ಮಹಾಪೂಜೆ, ಮಧ್ಯಾಹ್ನ ಮಹಾ ನೈವೇದ್ಯ, ಮಹಾಮಂಗಳಾರತಿ ನಡೆಯಿತು
ಸಂಜೆ ಮೃಗ ಬೇಟೆ ಉತ್ಸವ, ವನಪೇಟೆ ಪಲ್ಲಕ್ಕಿ ಸವಾರಿ, ಕಟ್ಟೆ ಪೂಜೆ ರಾತ್ರಿ ವನದಲ್ಲಿ ರಾತ್ರಿ ಹವನ, ಮಹಾ ನೈವೇದ್ಯ, ಮಂಗಳಾರತಿ, ದರ್ಶನ ಸೇವೆ ಭೂರಿ ಸಮಾರಾಧನೆ, ದೀಪ ನಮಸ್ಕಾರ, ರಾತ್ರಿ ಪೂಜೆ, ವನಸವಾರಿ ನಡೆಯಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.