ಕಿನ್ನಿಗೋಳಿ: ಪತ್ತೆರೆ ಕೂಟ ಪಕ್ಷಿಕೆರೆ ವತಿಯಿಂದ ಗ್ರಾಮ ಉಚ್ಚಯ ಕಾರ್ಯಕ್ರಮ ಪಕ್ಷಿಕೆರೆ ಸಂತ ಜೂದರ ಇಗರ್ಜಿಯ ಮೈದಾನದಲ್ಲಿ ಡಿ 27 ರಂದು ಭಾನುವಾರ ಬೆಳಿಗ್ಗೆ 9.00 ಗಂಟೆಯಿಂದ ಆರಂಭವಾಗಲಿದೆ.ಬೆಳಿಗ್ಗೆ 8.00 ಗಂಟೆಗೆ ಕೆಮ್ರಾಲ್ ಗ್ರಾಮ ಪಂಚಾಯತ್ ನಿಂದ ಗ್ರಾಮ ಉಚ್ಚಯ ನಡೆಯುವ ವೇದಿಕೆ ತನಕ ಮೆರವಣಿಗೆ ನಡೆಯಲಿದ್ದು ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಪಕ್ಷಿಕೆರೆ ಚರ್ಚ್ ಧರ್ಮ ಗುರುಗಳಾದ ಮೆಲ್ವಿನಿ ನೋರಾನ್ಹಾ, ಉದ್ಘಟನೆಯನ್ನು ಕೆಮ್ರಾಲ್ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಮತ್ತು ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ ನೆರವೇರಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಪಕ್ಷಿಕೆರೆ ಜುಮ್ಮಾ ಮಸೀದಿಯ ಧರ್ಮ ಗುರುಗಳಾದ ಇಬ್ರಾಹಿಂ ಪಾಲಿಲಿ ಸದರ್ ಉಸ್ತಾದ್, ಕೆ.ಕೆ ಪೇಜಾವರ, ವಿದ್ವಾನ್ ಪಂಜ ಬಾಸ್ಕರ ಭಟ್, ಮಿಥುನ್ ರೈ, ಸುನೀಲ್ ಅಳ್ವ ಮತ್ತಿತರರರು ವಹಿಸಿಕೊಳ್ಳಲಿದ್ದಾರೆ,ಕಾರ್ಯಕ್ರಮದಲ್ಲಿ ರವಿವ್ಧ ಸ್ಪರ್ಧೆಗಳು , ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು ವಿವಿಧ ರೀತಿಯ ಮಳಿಗೆಗಳು ಇರಲಿವೆ, ಸಂಜೆ ಸಂಜೆ 6.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಮೂಲ್ಕಿ ಸೀಮೆ ಅರಸರಾದ ಉಗ್ಗಣ್ಣ ಸಾವಂತರು ಒಡಿಯೂರು ಗುರುದೇವನಂದ ಸ್ವಾಮೀಜಿ, ಉಮಾನಾಥ ಕೋಟ್ಯಾನ್ ಅಭಯಚಂದ್ರ ಜೈನ್ ಮತ್ತಿತರರ ಗಣ್ಯರು ಭಾಗವಹಿಸಲಿದ್ದು, ಬಹುಮಾನ ವಿತರಣೆಯೂ ನಡೆಯಲಿದೆ ಎಂದು ಪತ್ತೆರೆ ಕೂಟದ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *