ಜಿಲ್ಲಾ ಪ್ರಶಸ್ತಿ ವಿಜೇತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ವಿನಾಯಕ ಮಿತ್ರ ಮಂಡಳಿ(ರಿ) ಪಕ್ಷಿಕೆರೆ ಇದರ ನೇತೃತ್ವದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಹಾಗೂ ಶ್ರೀ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ ಇದರ ಸಹಯೋಗದಲ್ಲಿ ದತ್ತಿ ನಿಧಿ ಹಾಗೂ ಆರೋಗ್ಯ ನಿಧಿಯ ಪ್ರಯುಕ್ತ “ವಿನಾಯಕ ಟ್ರೋಫಿ -2025” ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟ ದಿನಾಂಕ 16-02-25ರಂದು ಪಕ್ಷಿಕೆರೆ ಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮಯ್ಯದಿ ಅಧ್ಯಕ್ಷರು ಗ್ರಾಮಪಂಚಾಯಿತಿ ಕೆಮ್ರಾಲ್ ಇವರು ವಹಿಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ದಿವಾಕರ್ ಕರ್ಕೇರ ದೀಪ ಬೆಳಗಿಸಿ ಉದ್ಘಾಟಿಸಿದರು. ವಾಲಿಬಾಲ್ ಪಂದ್ಯಾಟಕ್ಕೆ ಅರುಣ್ ಪ್ರದೀಪ್ ಡಿಸೋಜಾ ಪಿಡಿಓ ಕೆಮ್ರಾಲ್ ಗ್ರಾಮ ಪಂಚಾಯತ್ ಇವರು ಚಾಲನೆ ನೀಡಿದರು, ಪಡುಪಣಂಬೂರು ಪಂಚಾಯತ್ ಉಪಾಧ್ಯಕ್ಷರಾದ ಹೇಮಾನಾಥ್ ಅಮೀನ್ , ಮುಲ್ಕಿ ತಾಲೂಕು ಸಂಜೀವಿನಿ ಒಕ್ಕೂಟ ಇದರ ಅಧ್ಯಕ್ಷೆಯಾದ ಭಾನುಮತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಗಣಪತಿ ಆಚಾರ್ಯ, ಮಂಡಳಿಯ ಗೌರವಾಧ್ಯಕ್ಷರಾದ ಧನಂಜಯ ಪಿ ಶೆಟ್ಟಿಗಾರ್, ಮಹಿಳಾ ಮಂಡಳಿಯ ಅಧ್ಯಕ್ಷೆಯಾದ ಸರಸ್ವತಿ ದಾಸ್, ಕಾರ್ಯದರ್ಶಿಯಾದ ಗೀತಾ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾದ ಮಮತಾ ದಾಸ್, ಮಂಡಳಿಯ ಅಧ್ಯಕ್ಷರಾದ ರಾಜೇಶ್ ಶೆಟ್ಟಿಗಾರ್, ಕ್ರೀಡ ಕಾರ್ಯದರ್ಶಿಯಾದ ಸುಜಿತ್ ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಮಂಡಳಿಯ ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿಗಾರ್ ಧನ್ಯವಾದ ಅರ್ಪಿಸಿದರು, ನರೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ವಾಲಿಬಾಲ್ ಪಂದ್ಯಾಟದಲ್ಲಿ
🔹 ಪ್ರಥಮ ಸ್ಥಾನ “ಫ್ರೆಂಡ್ಸ್ ಪಕ್ಷಿಕೆರೆ” ತಂಡವು ವಿನಾಯಕ ಟ್ರೋಫಿ ಹಾಗೂ ನಗದು ₹.10,001/-.
🔹 ದ್ವಿತೀಯ ಸ್ಥಾನ “ನಾಗಬ್ರಹ್ಮ ಹೊಸಕಾಡು” ವಿನಾಯಕ ಟ್ರೋಫಿ ಹಾಗೂ ನಗದು ₹.6,001/-
🔹 ತೃತೀಯ ಸ್ಥಾನ “ಶ್ರೀ ಮಹಾಲಿಂಗೇಶ್ವರ ರಾಯಿ” ವಿನಾಯಕ ಟ್ರೋಫಿ ಹಾಗೂ ನಗದು ₹3,001/-
🔹 ಚತುರ್ಥ ಸ್ಥಾನ ಪಡೆದ “ವಾಲಿ ಸ್ಪೈಕರ್ಸ್ ಪಕ್ಷಿಕೆರೆ” ವಿನಾಯಕ ಟ್ರೋಫಿ ಪಡೆದುಕೊಂಡರು.
ಪಂದ್ಯಾಕೂಟದ ಉತ್ತಮ ಹೊಡೆತಗಾರ, ಪಾಸರ್ ಮತ್ತು ಸವ್ಯಸಾಚಿ ಆಟಗಾರರಿಗೆ ಟ್ರೋಫಿ ನೀಡಿ ಪುರಸ್ಕರಿಸಲಾಯಿತು ಮತ್ತು ಶ್ರೀ ವಿನಾಯಕ ಮಹಿಳಾ ಮಂಡಳಿ ನೇತೃತ್ವದಲ್ಲಿ ಸ್ಥಳೀಯ ಮಹಿಳಾ ಸಂಘ ಸಂಸ್ಥೆಗಳಿಗೆ ತ್ರೋಬಾಲ್ ಪಂದ್ಯಾಟ ನಡೆಸಲಾಯಿತು. ಈ ಪಂದ್ಯಾಟದಲ್ಲಿ
🔹 ಪ್ರಥಮ ಸ್ಥಾನ – *ಶ್ರೀ ವಿದ್ಯಾ ವಿನಾಯಕ ಯುವತಿ ಹಾಗೂ ಮಹಿಳಾ ಮಂಡಳಿ ಹಳೆಯಂಗಡಿ,
🔹 ದ್ವಿತೀಯ ಸ್ಥಾನ – *ಶ್ರೀ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ
🔹 ತೃತೀಯ ಸ್ಥಾನ – *ಶ್ರೀ ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್ ತೋಕೂರು ಇವರು ಪಡೆದರು.