ಸಾಹಿತ್ಯ ಕ್ಷೇತ್ರದಲ್ಲಿ ವಿಶ್ವ ದಾಖಲೆಗಳಿಸಿದ ಯುವ ಸಾಹಿತಿ ಮತ್ತು ಸಮಾಜ ಸೇವಕಿಯಾದ ಶ್ರೀಮತಿ ವಿಂಧ್ಯಾ ಎಸ್ ರೈ ಕಡೇಶಿವಾಲಯ ಇವರು ರಾಜ್ಯಮಟ್ಟದ ಶ್ರೀ ಸೌರಭ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕುರುಂಬಾಜಿ ಗುತ್ತು ಸುಂದರ್ ರೈ ಅವರ ಧರ್ಮಪತ್ನಿ ಯಾಗಿದ್ದು ದಿನಾಂಕ 15 -12-2024 ರಂದು ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠ ಉಡುಪಿಯಲ್ಲಿ ನಡೆಯಲಿರುವ ಕಥಾಬಿಂದು ಪ್ರಕಾಶನ ಮಂಗಳೂರು ಆಶ್ರಯದಲ್ಲಿನ17ನೇ ವಾರ್ಷಿಕ ಸಂಭ್ರಮದಲ್ಲಿ ಈ ಪ್ರಶಸ್ತಿಯನ್ನು ಪಡೆಯಲಿದ್ದಾರೆ ಎಂದು ಕಥಾ ಬಿಂದು ಪ್ರಕಾಶನದ ಸಂಸ್ಥಾಪಕರಾದ ಶ್ರೀ ಪ್ರದೀಪ್ ಕುಮಾರ್ ಇವರು ತಿಳಿಸಿದ್ದಾರೆ.