ತ್ರಿಭಾಷೆಗಳಲ್ಲಿ ಬರಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಹಲವು ಮೈಲಿಗಲ್ಲನ್ನು ಸಾಧಿಸಿದ ಯುವ ಸಾಹಿತಿಯಾದ ವಿಂಧ್ಯಾ ಎಸ್ ರೈ ಇವರ ಮಡಿಲಿಗೆ ಇದೀಗ ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ ಮತ್ತು ಚೇತನ ಫೌಂಡೇಷನ್ ಕರ್ನಾಟಕ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ )ಬೆಂಗಳೂರು ಆಯೋಜಿಸಿರುವ ಪುಸ್ತಕ ಹಬ್ಬ ಹಾಗೂ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ “ಕಾವ್ಯ ಚೇತನ “ಪ್ರಶಸ್ತಿಗೆ ಆಯ್ಕೆ ಮಾಡಿಲಾಗಿದ್ದು, ಪ್ರಶಸ್ತಿಯನ್ನು ಆಗಸ್ಟ್ 18 ರ ರವಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇವರ ಹೆಸರು ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ನಲ್ಲೂ ದಾಖಲಾಗಿರುತ್ತದೆ. ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಬಹುಮುಖ ಪ್ರತಿಭಾನ್ವಿತೆಯಾಗಿದ್ದು ಇತ್ತೀಚೆಗೆ ನಡೆದ ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆಯ ಚುನಾವಣೆಯಲ್ಲಿ ವಿಜೇತರಾಗಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುತ್ತಾರೆ.ಇವರು ಕುರುoಬ್ಲಾಜೆಗುತ್ತು ಸುಂದರ ರೈಯವರ ಧರ್ಮಪತ್ನಿ.