Thursday, September 12, 2024
Homeರಾಷ್ಟ್ರೀಯಒಲಿಂಪಿಕ್ಸ್ ಫೈನಲ್‌ನಲ್ಲಿ ಅನರ್ಹ | ಕುಸ್ತಿಗೆ ವಿದಾಯ ಹೇಳಿದ ವಿನೇಶಾ ಪೋಗಟ್‌

ಒಲಿಂಪಿಕ್ಸ್ ಫೈನಲ್‌ನಲ್ಲಿ ಅನರ್ಹ | ಕುಸ್ತಿಗೆ ವಿದಾಯ ಹೇಳಿದ ವಿನೇಶಾ ಪೋಗಟ್‌

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಫೈನಲ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ಭಾರತದ ಕುಸ್ತಿಪಟು ವಿನೇಶಾ ಪೋಗಟ್‌ ಕುಸ್ತಿಗೆ ವಿದಾಯ ಹೇಳಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಅವರು ನಿವೃತ್ತಿ ಘೋಷಿಸಿದ್ದಾರೆ. ʻʻಕುಸ್ತಿ ನನ್ನ ವಿರುದ್ಧ ಗೆದ್ದಿದೆ. ನಾನು ಸೋತಿದ್ದೇನೆ. ನನ್ನನ್ನು ಕ್ಷಮಿಸಿ, ನಿಮ್ಮ ಕನಸು ಮತ್ತು ನನ್ನ ಧೈರ್ಯ ನುಚ್ಚು ನೂರಾಗಿದೆ. ಈಗ ನನಗೆ ಹೆಚ್ಚಿನ ಶಕ್ತಿ ಇಲ್ಲ. ನನ್ನನ್ನು ಕ್ಷಮಿಸಿದ್ದಕ್ಕೆ ನಿಮಗೆಲ್ಲರಿಗೂ ನಾನು ಋಣಿಯಾಗಿರುತ್ತೇನೆʼʼ ಎಂದು ಪೋಗಟ್‌ ಹೇಳಿದ್ದಾರೆ.
50 ಕೆಜಿ ಮಹಿಳೆಯರ ಫ್ರೀ ಸ್ಟೈಲ್‌ ಕುಸ್ತಿ ಪಂದ್ಯಾಟದಲ್ಲಿ ಪೋಗಟ್‌ ಫೈನಲ್‌ ತಲುಪಿದ್ದರು. ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ಹೆಚ್ಚು ಇದ್ದುದರಿಂದ ಅವರನ್ನು ಪಂದ್ಯದಿಂದಲೇ ಅನರ್ಹಗೊಳಿಸಲಾಯಿತು.
ವಿನೇಶಾ ಅವರನ್ನು 50 ಕೆಜಿ ತೂಕದ ವ್ಯಾಪ್ತಿಗೆ ತರಲು ತಂಡದ ಸಿಬ್ಬಂದಿ ಸಕಲ ಪ್ರಯತ್ನ ನಡೆಸಿದ್ದರು. ವಿನೇಶಾ ಅವರ ಕೂದಲನ್ನೂ ಕತ್ತರಿಸಲಾಗಿತ್ತು. ವಿನೇಶಾ ಮುಂಚಿನ ರಾತ್ರಿ ಇಡೀ ದೇಹವನ್ನು ದಂಡಿಸಿದ್ದರು. ಆದರೂ ತೂಕವನ್ನು ನಿಗದಿತ ಮಿತಿಗೆ ತರಲು ಸಾಧ್ಯವಾಗಲಿಲ್ಲ. ವಿನೇಶಾ ಪೋಗಟ್‌ ಅವರು ತಮ್ಮನ್ನು ಅನರ್ಹಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಕ್ರೀಡಾ ನ್ಯಾಯಾಲಯ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ. ತಮಗೆ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದೂ ವಿನೇಶಾ ಬೇಡಿಕೆ ಸಲ್ಲಿಸಿದ್ದಾರೆ. ವಿನೇಶಾ ಅವರು ಮೇಲ್ಮನವಿ ಸಲ್ಲಿಸಿರುವುದನ್ನು ಐಒಎ (ಭಾರತ ಒಲಿಂಪಿಕ್‌ ಸಂಸ್ಥೆ)ಯ ಮೂಲಗಳು ಖಚಿತಪಡಿಸಿವೆ.

RELATED ARTICLES
- Advertisment -
Google search engine

Most Popular