ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ್ದ ವಿನೇಶ್ ಪೋಗಾಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ. ಇಂದು ನಡೆಯಲಿರುವ ಫೈನಲ್ ಪಂದ್ಯಕ್ಕೂ ಮೊದಲು ವಿನೇಶ್ ಪೋಗಾಟ್ ಅನರ್ಹತೆಯ ಸುದ್ದಿ ಹೊರಬಿದ್ದಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಯೂಯ್ ಸುಸಾಕಿಯವರನ್ನು ವಿನೇಶ್ ಪೋಗಾಟ್ ನಿನ್ನೆ ಸೋಇಸುವ ಮೂಲಕ ಫೈನಲ್ ಪ್ರವೇಶಿಸಿದ್ದರು. ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಯೂಯ್ ಸುಸಾಕಿಯನ್ನು ನಿನ್ನೆ ಪೋಗಾಟ್ ಮಣ್ಣುಮುಕ್ಕಿಸಿದ್ದರು.
ಮಾಹಿತಿ ಪ್ರಕಾರ, 100 ಗ್ರಾಂ ಹೆಚ್ಚಿದ್ದ ಕಾರಣ ವಿನೇಶ್ ಇಂದು ಸಂಜೆ ನಡೆಯಬೇಕಾಗಿದ್ದ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ ಸದ್ಯ ಈ ವಿಚಾರ ಭಾರತೀಯರಿಗಂತೂ ಭಾರೀ ಬೇಸರ ತರಿಸಿದೆ.