ಮಂಗಳೂರು: ನಗರದ ಕೂಳೂರಿನ ಕಿಟ್ಟ ಮೊಗೇರ ವೇದಿಕೆಯಲ್ಲಿ ಫೆಬ್ರವರಿ 14 ಮತ್ತು 15 ರಂದು ನಡೆದ ಕರ್ನಾಟಕ ರಾಜ್ಯ ಮಟ್ಟದ ಮಾಸ್ಟರ್ಸ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ವಿನೋದ ಕುಮಾರ್ ಎಂ. ಅವರು ಅಮೋಘ ಸಾಧನೆ ಮಾಡಿದ್ದಾರೆ.

ಇವರು ‘ಕ್ಲಾಸಿಕ್’ (Classic) ಮತ್ತು ‘ಎಕ್ವಿಪ್ಡ್’ (Equipped) ಎಂಬ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ವಿನೋದ ಕುಮಾರ್ ಅವರು ಎಲ್‌ಐಸಿ (LIC) ನಿವೃತ್ತ ಅಭಿವೃದ್ಧಿ ಅಧಿಕಾರಿಯಾಗಿದ್ದು, ಮಂಗಳೂರಿನ ಬಾಲಾಂಜನೇಯ ಜಿಮ್ನಾಷಿಯಂನಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಸತೀಶ್ ಕುಮಾರ್ ಕುದ್ರೋಳಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

