ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ನೀತಿ ಸಂಹಿತೆ ಉಲ್ಲಂಘಿಸಿ ಪೋಸ್ಟರ್ ಹಚ್ಚಿದ ಆರೋಪದಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಕಂಬಗಳಿಗೆ ಹಾಗೂ ಗೋಡೆಗೆ ಮತ್ತು ಕರಾವಳಿ ಬೈಪಾಸ್ ಫ್ಲೈಓವರ್ ಕೆಳಗಡೆ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಚುನಾವಣಾಧಿಕಾರಿ ಅಥವಾ ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಈ ಕರಪತ್ರದಲ್ಲಿ ಮುದ್ರಣದ ಕುರಿತಂತೆ ಪ್ರಕಾಶಕರ ವಿವರ ನಮೂದಿಸದೆ ಒಂದು ಪಕ್ಷದ ವಿರುದ್ಧವಾಗಿ ಮುದ್ರಿಸಿರುವ ಪೋಸ್ಟರ್ ಗಳನ್ನು ಅಂಟಿಸಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ನೇತೃತ್ವ ವಹಿಸಿದ್ದ ಶ್ರೀವತ್ಸ. ಶಿವಪ್ರಸಾದ್, ಧನುಷ್ ಹಾಗೂ ಇತರರು ಈ ಪೋಸ್ಟರ್ ಅಂಟಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.