Sunday, July 14, 2024
Homeಪುತ್ತೂರುಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಪುತ್ತೂರಿನಲ್ಲಿ ಬಿರುಸಿನ ಪ್ರಚಾರ

ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಪುತ್ತೂರಿನಲ್ಲಿ ಬಿರುಸಿನ ಪ್ರಚಾರ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಪ್ರವಾಸದ ಮೂರನೇ ದಿನವಾದ 22-03-2024 ಶುಕ್ರವಾರದಂದು ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಿಟ್ಲದ ಅರಮನೆ ಬೇಟಿ ನೀಡಿ ಪುತ್ತೂರಿನಲ್ಲಿ ಚುನಾವಣಾ ಪ್ರವಾಸವನ್ನು ಪ್ರಾರಂಭಿಸಿದರು. ಪುತ್ತೂರು ನಗರ ಮಂಡಲ, ಬಲ್ನಾಡು, ಕೋಡಿಪ್ಪಾಡಿ, ಕಬಕ ಹಾಗೂ ಬನ್ನೂರು ಪಂಚಾಯತ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಂತರದಲ್ಲಿ ವಿಟ್ಲದ ಪ್ರಖ್ಯಾತ ಉದ್ಯಮಿ ಸುಬ್ರಾಯ ಪೈ ಅವರ ಗೇರು ಬೀಜ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ವರ್ಗದ ಜೊತೆ ಸಮಾಲೋಚನೆ ನಡೆಸಲಾಯಿತು.

ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರವಾಸದುದ್ದಕ್ಕೂ ಹಿರಿಯರ ಆಶೀರ್ವಾದಿಸುವ ಹಾಗೂ ಮಹಿಳೆಯರು ಸ್ವಾಗತಿಸುವ ದೃಶ್ಯ ಜನರ ಗಮನಸೆಳೆಯಿತು. ಮಧ್ಯಾಹ್ನದ ಹೊತ್ತಿಗೆ ಹನುಮಗಿರಿ ದೇವಸ್ಥಾನ, ದೇಯಿ ಬೈದ್ಯತಿ ಮೂಲಸ್ಥಾನ ಗೆಜ್ಜೆಗಿರಿ ಹಾಗೂ ಕೋಟಿ ಚೆನ್ನಯ್ಯ ಜನ್ಮಸ್ಥಾನ ಪಡುಮಲೆಗೆ ಬೇಟಿ ನೀಡಿದರು, ನೆಟ್ಟಣಿಗೆ ಮುಡ್ನಾರು, ಪಾಣಾಜೆ ಹಾಗೂ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರಗಳಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಚುನಾವಣೆಯಲ್ಲಿ ಎಲ್ಲರೂ ಸಕ್ರೀಯವಾಗಿ ಪಾಲ್ಗೂಳ್ಳುವಂತೆ ಮನವಿ ಮಾಡಿದರು. ಇಂದಿನ ಪ್ರವಾಸದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟರೊಂದಿಗೆ ಮಾಜಿ ಶಾಸಕ ಸಂಜೀವ ಮಠಂದೂರು, ಮಂಡಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮುಖಂಡರಾದ ಅರುಣ್ ಪುತ್ತಿಲ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular