Monday, March 17, 2025
HomeUncategorizedವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಹೊಕ್ಕಾಡಿಗೋಳಿ ಪೂರ್ವಭಾವಿ ಸಭೆ

ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಹೊಕ್ಕಾಡಿಗೋಳಿ ಪೂರ್ವಭಾವಿ ಸಭೆ

ಪೂಂಜ ಪಂಚದುರ್ಗಾ ಪರಮೇಶ್ವರಿ ಅಮ್ಮನವರ ಮತ್ತು ಮೂಜಿಲ್ನಾಯ ಕೊಡಮಣಿತ್ತಾಯ ದೈವಗಳ ನಂಟು ಹೊಂದಿರುವ ಇತಿಹಾಸ ಪ್ರಸಿದ್ಧ ಮಹಿಷಮರ್ಧಿನಿ ಕಂಬಳ ಸಮಿತಿ ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಹೊಕ್ಕಾಡಿಗೋಳಿ ಡಿಸೆಂಬರ್ 7 ಶನಿವಾರದಂದು ನಡೆಯುವ ಬಗ್ಗೆ ಸಭೆಯು ಇಂದು ಕಂಬಳ ವಠಾರದಲ್ಲಿ ಕಂಬಳ ಸಮಿತಿ ಅಧ್ಯಕ್ಷರಾದ ನೋಣಾಲ್ ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿಯವರ ಉಪಸ್ಥಿತಿಯಲ್ಲಿ ಇಂದು ಜರಗಿತು.ಕಂಬಳ ಕರೆಯ ಸುತ್ತಮುತ್ತಲಿನ ಕೆಲಸ ಕಾರ್ಯಗಳು ನಾಳೆಯಿಂದ ಪ್ರಾರಂಭಿಸಿ ಅತೀ ಶೀಘ್ರದಲ್ಲಿ ಕುದಿ ಕಂಬಳ ಪ್ರಾರಂಭಗೊಳ್ಳಲಿದೆ.ವಿವಿಧ ತಂಡದ ಸದಸ್ಯರು ಶ್ರಮದಾನದ ಮೂಲಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.ಕಳೆದ ವರ್ಷ ಕಂಬಳಕ್ಕೆ ಸಹಕರಿಸಿದವರನ್ನು ಅಭಿನಂದಿಸಲಾಯಿತು. ಸಮಿತಿಯ ಹಿರಿಯ ಸಂಘಟಕರು, ಸ್ಥಳ ದಾನಿಗಳು,ಕಂಬಳ ಸಮಿತಿಯ ಎಲ್ಲಾ ಪದಾಧಿಕಾರಿಗಳು, ವಿವಿಧ ಭಜನಾ ಮಂಡಳಿ ಮತ್ತು ಸಂಘ ಸಂಸ್ಥೆಯ ಸದಸ್ಯರು ಸೂಕ್ತ ಸಲಹೆ ನೀಡಿದರು. ಇತಿಹಾಸ ಸೃಷ್ಟಿಸಿದ ಈ ಭಾರಿಯ ಹೊಕ್ಕಾಡಿಗೋಳಿ ಕಂಬಳ ಸಾಂಸ್ಕೃತಿಕ ನಗರಿ ಹೊಕ್ಕಾಡಿಗೋಳಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಬಿಸಲಿದೆ.

RELATED ARTICLES
- Advertisment -
Google search engine

Most Popular