Sunday, March 23, 2025
HomeUncategorizedಡಿವೈಡರ್‌ ದಾಟಿ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಕಾರು ಡಿಕ್ಕಿ | ಇಬ್ಬರು ಸ್ಥಳದಲ್ಲೇ ಸಾವು; ಬೆಚ್ಚಿಬೀಳುವ...

ಡಿವೈಡರ್‌ ದಾಟಿ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಕಾರು ಡಿಕ್ಕಿ | ಇಬ್ಬರು ಸ್ಥಳದಲ್ಲೇ ಸಾವು; ಬೆಚ್ಚಿಬೀಳುವ ವಿಡಿಯೋ ವೈರಲ್

ಹೈದರಾಬಾದ್​: ಡಿವೈಡರ್‌ ದಾಟಿ ಎದುರಿಗೆ ಬರುತ್ತಿದ್ದ ಬಸ್ಸೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾಫ್ಟ್​ವೇರ್​ ಉದ್ಯೋಗಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೆಲಂಗಾಣದ ಮೇಡ್ಚಲ್‌-ಸಮೀರ್‌ ಪೇಟೆಯ ರಾಜೀವ್‌ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಸಾಫ್ಟ್​ವೇರ್​ ಉದ್ಯೋಗಿಗಳಾದ ಮೋಹನ್ (25) ಮತ್ತು ದೀಪಿಕಾ (25) ಮೃತಪಟ್ಟವರು. ಇವರು ಮೇಡ್ಚಲ್‌-ಸಮೀರ್‌ಪೇಟೆಯ ರಾಜೀವ್‌ ರಸ್ತೆಯಲ್ಲಿ ಕಾರಿನಲ್ಲಿ ವೇಗವಾಗಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಡಿವೈಡರ್​ ದಾಟಿ, ಇನ್ನೊಂದು ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ಬಸ್ಸಿ​ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ಸಿನ ಹಿಂದೆ ಇನ್ನೊಂದು ಬಸ್ಸು​ ಬರುತ್ತಿತ್ತು. ಸ್ವಲ್ಪದರಲ್ಲೇ ಇನ್ನೂ ಹೆಚ್ಚಿನ ಅಪಾಯ ತಪ್ಪಿದೆ ಎಂದು ಹೇಳಲಾಗುತ್ತಿದೆ.

ರಂಗಾರೆಡ್ಡಿ ಜಿಲ್ಲೆಯಲ್ಲಿನ ಗಚ್ಚಿಬೌಲಿಯ ಸಾಫ್ಟ್‌ವೇರ್ ಕಂಪನಿಯಲ್ಲಿ ಮೃತರು ಉದ್ಯೋಗಿಗಳಾಗಿದ್ದರು. ಕಾರು ಬಸ್ಸಿ​ಗೆ ಡಿಕ್ಕಿ ಹೊಡೆದುದರಿಂದ ಬಸ್ಸಿನ ಮುಂಭಾಗವೆಲ್ಲ ಹಾನಿಯಾಗಿದ್ದು, ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಈ ಭೀಕರ ದೃಶ್ಯಗಳು ಬಸ್ಸಿನ ಹಿಂದಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಫುಲ್ ವೈರಲ್ ಆಗಿದೆ.

ವಿಡಿಯೋ ನೋಡಲು ಲಿಂಕ್‌ ಕ್ಲಿಕ್‌ ಮಾಡಿ…

https://x.com/TeluguScribe/status/1817256153673613462

RELATED ARTICLES
- Advertisment -
Google search engine

Most Popular