ಹೈದರಾಬಾದ್: ಸೋಶಿಯಲ್ ಮೀಡಿಯಾ ಪ್ರಭಾವಿಯೊಬ್ಬ ಕಂತೆ ಕಂತೆ ನೋಟುಗಳನ್ನು ರಸ್ತೆಗೆ ಎಸೆದಿರುವ ಘಟನೆ ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ನಡೆದಿದೆ. ವಾಹನ ದಟ್ಟಣೆಯಿದ್ದರೂ, ನಡು ರಸ್ತೆಯಲ್ಲಿ ನಿಂತು ಯುವಕನೊಬ್ಬ ನೋಟುಗಳನ್ನು ರಸ್ತೆಗೆ ಎಸೆದು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ನೋಟು ಸುರಿಯುತಿದ್ದಂತೆ ಸ್ಥಳೀಯರು ಶಾಕ್ ಆಗಿದ್ದಾರೆ. ಹಣದ ಸುರಿಮಳೆಯನ್ನು ಕಂಡು ಜನರು ಹಣ ಹೆಕ್ಕಲು ಮುಗಿಬಿದ್ದಿದ್ದಾರೆ.
ಈ ವಿಡಿಯೋ ಈಗ ವೈರಲ್ ಆಗಿದ್ದು, ಆ.21ರಂದು ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ವಾಹನ ದಟ್ಟಣೆಯ ನಡುವೆ ರಸ್ತೆಯಲ್ಲೇ ಹಣ ಎಸೆದಿರುವುದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದಯವಿಟ್ಟು ಈತನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ನೆಟ್ಟಿಗರೊಬ್ಬರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕಂಟೆಂಟ್‌ಗಾಗಿ ಇಂತಹ ಕೃತ್ಯಕ್ಕಿಳಿಯುವುದು ಸರಿಯಲ್ಲ ಎಂದು ನೆಟ್ಟಿಗರ ಅಭಿಪ್ರಾಯವಾಗಿದೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…