Tuesday, June 18, 2024
Homeರಾಷ್ಟ್ರೀಯಎದ್ದು ಕುಳಿತ ಹೊಂಡದಲ್ಲಿ ತೇಲುತ್ತಿದ್ದ ಶವ! : ವಿಡಿಯೋ ನೋಡಿದರೆ ನೀವೂ ಬಿದ್ದುಬಿದ್ದು ನಗ್ತೀರಾ!

ಎದ್ದು ಕುಳಿತ ಹೊಂಡದಲ್ಲಿ ತೇಲುತ್ತಿದ್ದ ಶವ! : ವಿಡಿಯೋ ನೋಡಿದರೆ ನೀವೂ ಬಿದ್ದುಬಿದ್ದು ನಗ್ತೀರಾ!

ಹೈದರಾಬಾದ್:‌ ಕೊಳವೊಂದರಲ್ಲಿ ಶವವೊಂದು ತೇಲುತ್ತಿತ್ತು, ಪುರುಷನ ಮೃತದೇಹವೆಂದು ತಿಳಿದು ಶವ ಮೇಲಕ್ಕೆತ್ತಲೆಂದು ಬಂದಿದ್ದ ಪೊಲೀಸರು ಮತ್ತು ರಕ್ಷಣಾ ತಂಡಕ್ಕೆ ಅಚ್ಚರಿಯೊಂದು ಕಾದಿದೆ. ನೆರೆದಿದ್ದವರೆಲ್ಲಾ ನಕ್ಕು ನಕ್ಕು ಸುಸ್ತಾಗಿದ್ದಾರೆ.
ತೆಲಂಗಾಣದ ಹನುಮಕೊಂಡದ ರೆಡ್ಡಿಪುರಂ ಕೊವೆಲಕುಂಟ್ಲಾ ಬಳಿಯ ಕೊಳವೊಂದರಲ್ಲಿ ಶವವೊಂದು ತೇಲುತ್ತಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾಕತೀಯ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಸ್ಥಳಕ್ಕೆ ಕ್ಷಣಾರ್ಧದಲ್ಲಿ ಧಾವಿಸಿದ್ದರು. ಜೊತೆಗೆ ತುರ್ತು ವೈದ್ಯಕೀಯ ಸೇವಾ ಸಿಬ್ಬಂದಿಯನ್ನೂ ಕರೆ ತಂದಿದ್ದರು.
ಶವ ತೇಲುತ್ತಾ ಹೊಂಡದ ಬದಿಗೆ ಬಂದಿತ್ತು ಎಂದು ಭಾವಿಸಿದ ಪೊಲೀಸರು ಶವವನ್ನು ದಡಕ್ಕೆ ಎಳೆಯಲು ಯತ್ನಿಸಿದರು. ಪೊಲೀಸ್‌ ಒಬ್ಬರು ಶವದ ಕೈಬೆರಳನ್ನು ಹಿಡಿದು ಎಳೆಯಲು ಯತ್ನಿಸಿದಾಗ ಶವದಂತೆ ನೀರಿನಲ್ಲಿ ತೇಲುತ್ತಿದ್ದ ವ್ಯಕ್ತಿ ಎದ್ದು ಕುಳಿತನು. ಪೊಲೀಸರು ಮತ್ತು ಅಲ್ಲಿದ್ದವರು ಗಾಬರಿಯಿಂದ ನೋಡುತ್ತಿದ್ದಂತೆ, ನಾನು ನೀರಿನಲ್ಲಿ ತೇಲುತ್ತಿದ್ದೆನಷ್ಟೇ ಎಂದು ಹೇಳಿದ್ದಾನೆ. ನೀರನ್ನು ತಲೆ ಮೇಲೆ ಹಾಕಿಕೊಂಡು ತಾನು ಸತ್ತಿಲ್ಲ, ಜೀವಂತವಿದ್ದೇನೆ ಎಂದು ತೋರಿಸಿದನು. ಇದನ್ನು ಕಂಡು ಪೊಲೀಸರು, ಸ್ಥಳೀಯರು ನಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಸತತ 5 ಗಂಟೆ ನೀರಿನಲ್ಲಿ ತೇಲುತ್ತಿದ್ದ ವ್ಯಕ್ತಿಯನ್ನು ಕಂಡು ಸ್ಥಳೀಯರು ಶವವೆಂದು ಭಾವಿಸಿದ್ದೇ ಯಡವಟ್ಟಾಗಿತ್ತು. ನೀರಿನಲ್ಲಿ ತೇಲುತ್ತಿದ್ದ ವ್ಯಕ್ತಿ ಕ್ವಾರಿ ಕೆಲಸಗಾರ ಎಂದು ತಿಳಿದುಬಂದಿದೆ. ಪೊಲೀಸರು ವ್ಯಕ್ತಿಯನ್ನು ಎಳೆಯುವ ವಿಡಿಯೋ ವೈರಲ್‌ ಆಗಿದೆ. ನೋಡಿದ ಜನ ಬಿದ್ದು ಬಿದ್ದು ನಗುತ್ತಿದ್ದಾರೆ.

https://x.com/sudhakarudumula/status/1800158880506478918?ref_src=twsrc%5Etfw%7Ctwcamp%5Etweetembed%7Ctwterm%5E1800158880506478918%7Ctwgr%5Ed6ed546c31441ce522a550c5e09d1baa75faa4ad%7Ctwcon%5Es1_&ref_url=https%3A%2F%2Fkannada.news18.com%2Fnews%2Fnational-international%2Fviral-video-motionless-man-floating-in-pond-mistook-to-be-dead-body-in-telangana-kvd-1736666.html

RELATED ARTICLES
- Advertisment -
Google search engine

Most Popular