ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ (ರಿ) ಮುಡಿಪು ಇವರಿಂದ ವಿಶ್ವ ಭಾರತಿ ಯಕ್ಷ ಸಂಭ್ರಮ ಅಂಗವಾಗಿ ಭಾರತ ದರ್ಶನ ಒಂಬತ್ತು ದಿನಗಳ ಸರಣಿ ತಾಳಮದ್ದಳೆ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಸಭಾಭವನದಲ್ಲಿ ಶನಿವಾರದಂದು ಯಕ್ಷ ದಶಾವತಾರಿಕೆ ಗೋವಿಂದ ಭಟ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವಸಂತ ಮಾಸ್ಟರ್ ಬಾಯಾರು ಗಿರೀಶ್ ಮುಳಿಯಾಲ ನ್ಯಾಯವಾದಿಗಳು ಬಂಟ್ವಾಳ ನಿವೃತ್ತ ಉಪತಶಿಲ್ದಾರ್ ಮೋಹನ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತುಳು ಶಿವಳ್ಳಿ ಸೇವಾ ಟ್ರಸ್ಟ್ ಅಧ್ಯಕ್ಷ ರಾಜಾರಾಮ್ ಭಟ್ ಅಧ್ಯಕ್ಷತೆಯಲ್ಲಿ ಜರಗಿತು. ಸಂಚಾಲಕ ಪ್ರಶಾಂತ್ ಕುಮಾರ್ ಹೊಳ್ದ ಸರ್ವರನ್ನು ಸ್ವಾಗತಿಸಿದರು ಜಗದೀಶ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.