ಕಾರ್ಕಳ ಪಡುತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ಬಜರಂಗದಳ ಕಾರ್ಯಕರ್ತರಿಂದ ಬೋಳ ಪ್ರಭಾಕರ್ ಕಾಮತ್ ಉಪಸ್ಥಿತಿಯಲ್ಲಿ ದತ್ತ ಮಾಲಾಧಾರಣೆಗೆ ಡಿಸೆಂಬರ್ 6 ಶುಕ್ರವಾರ ಸ್ಕಂದ ಪಂಚಮಿಯಂದು ಚಾಲನೆ ನೀಡಲಾಯಿತು. ವಿಶ್ವ ಹಿಂದೂ ಪರಿಷದ್ ಪ್ರಾಂತ ಧರ್ಮಪ್ರಸಾರ ಪ್ರಮುಖ್ ಸುನಿಲ್ ಕೆ ಆರ್, ತಾಲೂಕು ಕಾರ್ಯದರ್ಶಿ ಪ್ರಸಾದ್ ನಿಟ್ಟೆ, ಬಜರಂಗದಳ ಜಿಲ್ಲಾ ಸಂಯೋಜಕ್ ಚೇತನ್ ಪೇರಲ್ಕೆ, ತಾಲೂಕು ಸಂಯೋಜಕ್ ಮನೀಶ್ ನಿಟ್ಟೆ ಹಾಗೂ ಕಾರ್ಯಕರ್ತರು ಮಾಲಾಧಾರಣೆ ಮಾಡಿದರು. ಡಿಸೆಂಬರ್ 12 ರಂದು ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ಅನಸೂಯಾ ದೇವಿ ಪೂಜೆ, ಡಿಸೆಂಬರ್ 13 ಬೃಹತ್ ಶೋಭಾಯಾತ್ರೆ ಹಾಗೂ ಡಿಸೆಂಬರ್ 14 ರಂದು ದತ್ತಪೀಠದಲ್ಲಿ ದತ್ತ ಜಯಂತಿ ಹಾಗೂ ದತ್ತ ಪಾದುಕಾ ದರ್ಶನ ನಡೆಯಲಿದೆ. ಉಡುಪಿ ಜಿಲ್ಲೆ ಹಾಗೂ ಕಾರ್ಕಳ ತಾಲೂಕಿನಾದ್ಯಂತ ಸಾವಿರಾರು ದತ್ತ ಭಕ್ತರು, ಹಿಂದೂ ಕಾರ್ಯಕರ್ತರು ಮಾಲಾಧಾರಣೆ ಮಾಡಿ ದತ್ತ ಜಯಂತಿಯಂದು ದತ್ತ ಪಾದುಕೆ ದರ್ಶನ ಮಾಡಲಿದ್ದಾರೆ.