ಯುವಕರಲ್ಲಿ ಆತ್ಮವಿಶ್ವಾಸ ಬೆಳೆಸುವ, ಹಾಗೂ ಎಲ್ಲಾ ಆಸಕ್ತರಿಗೆ ಮುಕ್ತವಾಗಿರುವ, ವಿಶಿಷ್ಟ ರೀತಿಯ ತರಬೇತಿ ವಿಶ್ವ ಕೊಂಕಣಿ ಕೇಂದ್ರದ ಸಿ.ಎ. ಪವರ್ 25 ತರಬೇತಿ, ಈ ವರೆಗೆ ಸಿ.ಎ. ಇಂಟರ್ ಪರೀಕ್ಷೆಗೆ ಸೀಮಿತವಾಗಿದ್ದ ತರಬೇತಿಯು ಪ್ರಥಮ ಬಾರಿಗೆ ಸಿ.ಎ ಫೈನಲ್, ಪರೀಕ್ಷೆಗೂ ವ್ಯವಸ್ಥೆ ಗೊಳಿಸಲಾಯಿತು. ಸುಮಾರು 51 ದಿವಸಗಳ ಈ ಸುಧೀರ್ಘ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಿ.08-03-2025 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.
ವಿದ್ಯಾರ್ಥಿಗಳು ತಮ್ಮ ಅವಿರತ ಛಲ ಸಾಧನೆ, ಆತ್ಮವಿಶ್ವಾಸ ದಿಂದ ಮಾತ್ರ ತಮ್ಮ ಗುರಿ ಮುಟ್ಟಲು ಸ್ಸಾಧ್ಯ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈಯವರು ಶಿಬಿರಾರ್ಥಿಗಳಿಗೆ ಕಿವಿಮಾತು ನೀಡಿದರು.
ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಡಾ. ನಾರಾಯಣ ಕಾಯರ ಕಟ್ಟೆ ಅವರು ಸಿ.ಎ. ಅಂತಿಮ ಪರೀಕ್ಷೆಗಳನ್ನು ಎದುರಿಸಲು ಪರೀಕ್ಷಾರ್ಥಿಗಳಿಗೆ ಅವಶ್ಯಕವಾಗಿರುವ ಮನೋಸಾಮರ್ಥ್ಯಗಳ ಬಗ್ಗೆ ವಿವರಣೆ ನೀಡಿದರು.
ಈ ತರಬೇತಿಗೆ ದೇಶದ ಹೆಸರುವಾಸಿ ತಜ್ ಉಪನ್ಯಾಸಕರನ್ನು ಆಹ್ವಾನಿಸಲಾಗಿದ್ದು ಹೈದರಾಬಾದನ ಉಪನ್ಯಾಸಕ ಸಿ ಎ. ಸೂರಜ್ ಲಖೋಟಿಯಾ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಂತಹ ಒಂದು ಉಪಯುಕ್ತವಾದಂತಹ ಹಾಗೂ ಸುಸಜ್ಜಿತವಾದ ಸೌಕರ್ಯಗಳೊಂದಿಗೆ ವ್ಯವಸ್ಥಿತ ಮಾರ್ಗದರ್ಶನ ನೀಡುವ ಶಿಬಿರಗಳೆಲ್ಲಿಯೂ ಇರುವುದಿಲ್ಲ ಕಾರ್ಯಕ್ರಮವನ್ನು ಆಯೋಜಿಸಿದ ವಿಶ್ವ ಕೊಂಕಣಿ ಕೇಂದ್ರವನ್ನು ಶ್ಲಾಘಿಸುತ್ತಾ ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು ಎಂದು ಶುಭ ಹಾರೈಸಿದರು.
ಕೇಂದ್ರದ ಮುಖ್ಯ ಆಡಳಿತ ಅಧಿಕಾರಿ ಡಾ. ಬಿ. ದೇವದಾಸ್ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐವತ್ತೊಂದು ದಿವಸಗಳ ಅವಧಿಯ ಈ ಉಚಿತ ಸನಿವಾಸೀ ತರಬೇತಿಯಲ್ಲಿ ಪರೀಕ್ಷಾರ್ಥಿಗಳಿಗೆ ಆಧುನಿಕ ಮಾದರಿಯಲ್ಲಿ ಸಂಪೂರ್ಣ ಪುನರಾವರ್ತನೆ ಹಾಗೂ ಅಣಕ ಪರೀಕ್ಷೆ ನೀಡಿ ಅಂತಿಮ ಮಟ್ಟಕ್ಕೆ ಸಿದ್ಧಗೊಳಿಸುವ ಉದ್ದೇಶ ಹೊಂದಿದೆ.
ವಿದ್ಯಾಕಲ್ಪಕ ಸಂಸ್ಠೆ, ಸಿ.ಎ. ಉಲ್ಲಾಸ್ ಕಾಮತ್ ರವರ ಯು.ಕೆ. ಆಂಡ್ ಕೊ ಮತ್ತು ತ್ರಿಶಾ ಕ್ಲಾಸಸ್ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಈ ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ.
ಮೈಸೂರು, ಮುಂಬಯಿ, ಹೈದರಾಬಾದ ದೂರದ ಸ್ಥಳಗಳಿಂದ ಬಂದಿರುವ ಶಿಬಿರಾರ್ಥಿಗಳು ಉತ್ಸಾಹದಿಂದ ಹಾಗೂ ಆತ್ಮವಿಶ್ವಾಸದಿಂದ ಶಿಬಿರದಲ್ಲಿ ತಾವು ಪಡೆದ ಅನುಭವಗಳನ್ನು, ಹಂಚಿಕೊಂಡರು. ವಿದ್ಯಾರ್ಥಿ ರಕ್ಷಿತಾ ಅತಿಥಿಗಳನ್ನು ಸ್ವಾಗತಿಸಿದರು, ಸ್ವಪ್ನಾ ಗುಪ್ತಾ ಕಾರ್ಯಕ್ರಮ ನಿರ್ವಹಿಸಿದರು. ಮಹಿಮಾ ಕಾಮತ್ ಧನ್ಯವಾದ ಸಮರ್ಪಣೆ ಮಾಡಿದರು.