ಸಿ.ಎ. ಪವರ್ 25- ಸಿ.ಎ ಇಂಟರ್ ಗ್ರೂಪ್ 1 ಸೀಸನ್ -6 ಶಿಬಿರದ ಉದ್ಘಾಟನಾ ಸಮಾರಂಭ ದಿ. 17-03-2025 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.
“ಸಿ.ಎ. ಪವರ್ 25” ಸಾಮಾನ್ಯ ಸಾಮರ್ಥ್ಯದ ಯುವಕರಲ್ಲಿ ಸಿ.ಎ. ಪರೀಕ್ಷಾಪೂರ್ವ ತರಬೇತಿ ಆತ್ಮವಿಶ್ವಾಸ ಬೆಳೆಸುವ, ಹಾಗೂ ಎಲ್ಲಾ ಆಸಕ್ತರಿಗೆ ಮುಕ್ತವಾಗಿರುವ, ವಿಶಿಷ್ಟ ರೀತಿಯ ತರಬೇತಿ.
SIRC ಅಧ್ಯಕ್ಷರಾದ ಸಿಎ ಪ್ರಶಾಂತ ಪೈ ದೀಪ ಬೆಳಗಿಸಿ ಶಿಬಿರದ ಶುಭಾರಂಭ ನಡೆಸಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈಯವರು ಈ ಶಿಬಿರವು ಸಿ.ಎ. ಕಲಿಯುವ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದ್ದು ಆತ್ಮವಿಶ್ವಾಸದಿ0ದ ಇದರ ಸಂಪೂರ್ಣ ಸದುಪಯೋಗ ಪಡೆದುಕೊಂಡು ಯಶ ಪಡೆಯಬೇಕು ಎಂದು ಶುಭ ಹಾರೈಸಿದರು.
ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಸ್ಥಾಪಕ ಹಾಗೂ ಮುಖ್ಯ ಆಡಳಿತ ಅಧಿಕಾರಿ ಸಿಎ ಗೋಪಾಲ ಕೃಷ್ಣ ಭಟ್ ಅವರು ಸಿ.ಎ. ಪರೀಕ್ಷೆಗಳನ್ನು ಎದುರಿಸಲು ಪರೀಕ್ಷಾರ್ಥಿಗಳಿಗೆ ಅವಶ್ಯಕವಾಗಿರುವ ಅಳವಡಿಸಬೇಕಾದ ಮೌಲ್ಯಗಳ ಬಗ್ಗೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯುಶನ್ ನ ಡಾ. ನಾರಾಯಣ್ ಕಾಯರ ಕಟ್ಟೆ, SIRC ಕಾರ್ಯದರ್ಶಿ ಮಮತಾ ರಾವ್, ಸಿಎ ಪ್ರಸನ್ನಾ ಶೆಣೈ, ಸಿಎ ಗೌತಮ್ ನಾಯಕ್, ಸಿಎ ಗೌರವ ಹೆಗ್ಡೆ, SICASA ಅಧ್ಯಕ್ಷರಾದ ಸಿಎ ನಿತಿನ ಬಾಳಿಗಾ, ಹಿರಿಯರಾದ ತುಲಾಸಿದಾಸ್ ಶೆಣೈ, ಉಪನ್ಯಾಸಕರಾದ ಸಿ.ಎ. ಆದರ್ಶ್ ಶೆಣೈ, ಕೇಂದ್ರದ ಕೋಶಾಧಿಕಾರಿ ಬಿ ಆರ್ ಭಟ, ಉಪನ್ಯಾಸಕರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿ.ಕೊ.ಕೇ ಆಡಳಿತ ಅಧಿಕಾರಿ ಡಾ. ಬಿ. ದೇವದಾಸ್ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿ.ಎ ಇಂಟರ ತರಬೇತಿ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹತ್ತು ದಿನಗಳ ಅವಧಿಯ ಈ ಉಚಿತ ಸನಿವಾಸೀ ತರಬೇತಿಯಲ್ಲಿ ಪರೀಕ್ಷಾರ್ಥಿಗಳಿಗೆ ಉತ್ತಮ ಆಧುನಿಕ ಮಾದರಿಯಲ್ಲಿ ಸಂಪೂರ್ಣ ಪುನರಾವರ್ತನೆ ಹಾಗೂ ಅಣಕ ಪರೀಕ್ಷೆ ನೀಡಲಾಗುವುದು. ಸಿ.ಎ. ಉಲ್ಲಾಸ್ ಕಾಮತ್ ರವರ ಯು.ಕೆ. ಆಂಡ್ ಕೊ ಮತ್ತು ತ್ರಿಶಾ ಕ್ಲಾಸಸ್ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಈ ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ.