Monday, February 10, 2025
Homeಮೂಡುಬಿದಿರೆದ.ಕ.ಸಂಸದ ಬೃಜೇಶ್ ಚೌಟ ಪುತ್ತಿಗೆ ಕ್ಷೇತ್ರಕ್ಕೆ ಭೇಟಿ : ಜೀರ್ಣೋದ್ಧಾರ ಕಾಮಗಾರಿ ವೀಕ್ಷಣೆ, ವೆಬ್ಸೈಟ್ ಅನಾವರಣ

ದ.ಕ.ಸಂಸದ ಬೃಜೇಶ್ ಚೌಟ ಪುತ್ತಿಗೆ ಕ್ಷೇತ್ರಕ್ಕೆ ಭೇಟಿ : ಜೀರ್ಣೋದ್ಧಾರ ಕಾಮಗಾರಿ ವೀಕ್ಷಣೆ, ವೆಬ್ಸೈಟ್ ಅನಾವರಣ

ಮೂಡುಬಿದಿರೆ: ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿರುವ ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ದ.ಕ. ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ ಮಂಗಳವಾರ ಆಗಮಿಸಿ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಕ್ಷೇತ್ರದ ವೆಬ್ ಸೈಟ್ ನ್ನು ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು ಕರಾವಳಿ ಕರ್ನಾಟಕದಲ್ಲಿ ಹೆಚ್ಚಿನ ದೇವಸ್ಥಾನಗಳು ಉತ್ತಮ ರೀತಿಯಲ್ಲಿ ಜೀರ್ಣೋದ್ಧಾರ ಕಾಣುತ್ತಿವೆ. ಅದರಂತೆ ಐತಿಹಾಸಿಕ ಪರಂಪರೆ, ವೈಶಿಷ್ಟ್ಯತೆಯನ್ನು ಹೊಂದಿರುವ ಪುತ್ತಿಗೆ ಕ್ಷೇತ್ರವೂ ಉತ್ತಮ ದೇವಸ್ಥಾನವಾಗಿ ಮೂಡಿ ಬರಲಿದೆ.
ವಿದ್ಯಾ ಕಾಶಿಯಾಗಿರುವ ಮೂಡುಬಿದಿರೆಗೆ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಿದ್ದು ಇಂತಹ ಸಂದರ್ಭದಲ್ಲಿ ನಮ್ಮ ಪ್ರತಿಯೊಬ್ಬರ ನಡೆ ನುಡಿ, ಆಚಾರ ವಿಚಾರಗಳು, ನಡವಳಿಕೆ ಉತ್ತಮವಾಗಿರಬೇಕು. ಇಲ್ಲಿನ ಸನಾತನ ಸಂಸ್ಕೃತಿ, ಆಚಾರ ವಿಚಾರವನ್ನು ವಿದ್ಯಾಥಿ೯ಗಳು ಮೈಗೂಡಿಸಿಕೊಂಡು ಬೇರೆ ಬೇರೆ ಕಡೆಗಳಿಗೆ ಪಸರಿಸಲು ಅವಕಾಶ ಮಾಡಿಕೊಡುವ ಮೂಲಕ ದೇವಸ್ಥಾನಗಳು ಮಾದರಿಯಾಗಬೇಕಿದೆ.

ಚುನಾವಣಾ ಪೂರ್ವದಲ್ಲಿ ಕ್ಷೇತ್ರಕ್ಕೆ ಬಂದು ಸೋಮನಾಥನ ಆಶೀರ್ವಾದ ಪಡೆದುಕೊಂಡಿದ್ದೆ ಅದರಂತೆ ಜಿಲ್ಲೆಯ ಜನರ ಜೊತೆ ಬೆರೆಯಲು ಅವಕಾಶ ಸಿಕ್ಕಿದೆ. ಅದಕ್ಕಾಗಿ ಮಕರ ದಿನವನ್ನು ಆಯ್ಕೆ ಮಾಡಿಕೊಂಡು ಕ್ಷೇತ್ರಕ್ಕೆ ಬಂದಿದ್ದೇನೆ. ಬ್ರಹ್ಮಕಲಶದ ಸಂದರ್ಭದಲ್ಲಿ ಭಕ್ತನಾಗಿ ಭಾಗವಹಿಸುವೆ ಎಂದ ಅವರು ಎಲ್ಲರೂ ಒಟ್ಟಾಗಿ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕೆಲಸವನ್ನು ಮಾಡೋಣ ಎಂದರು.

ಈ ಸಂದರ್ಭದಲ್ಲಿ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ಚೌಟರ ಅರಮನೆಯ ಕುಲದೀಪ್ ಎಂ., ಕೆಎಂಎಫ್ ನ ದ.ಕ. ಜಿಲ್ಲಾ ಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಜೋಯ್ಲಸ್ ತಾಕೊಡೆ,ಮೂಡುಬಿದಿರೆ ಹಾಗೂ ಜೀರ್ಣೋದ್ಧಾರದ ಪದಾಧಿಕಾರಿಗಳು ಈ ಸಂದಭ೯ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular